ಭೌತಿಕ ಲೋಕದ ಮಾಂತ್ರಿಕತೆಯಲ್ಲಿ ಸೂಕ್ಷ್ಮತೆಯ ಕಳಕಳಿ, ಮಾನವೀಯತೆಯ ಮನಸ್ಸು, ಶಾಂತಿಯ ತಮಸ್ಸುಇವೆಲ್ಲವೂ ಮಾಯವಾಗಿದೆ. ಆದರೆ ಇದನೆಲ್ಲವನು ರಕ್ಷಿಸುವವನು ಬರಹಗಾರ. ಸಾಮಾನ್ಯ ನೋಟಗಳಿಗೆ ಕಾಣದ ಸಾಮಾನ್ಯ ವಿಷಯಗಳು ಕಬ್ಬಿಗನಿಗೆ ವಿಶಿಷ್ಟವಾಗಿ ಕಾಣುವುದು. ಆತ ಸಾಮಾನ್ಯತೆಯಲ್ಲಿ ಅಸಾಮಾನ್ಯತೆಯನ್ನು ಸೃಷ್ಟಿಸುವ ಸೃಷ್ಟಿಕರ್ತ. ನಮ್ಮ ಬೆಂಗಳೂರಿನಲ್ಲಿ ಯುವ ಕವಿ ಸಮುದಾಯವು ತನ್ನದೆಯಾದ ಅಸ್ತಿತ್ವವನ್ನು ಸೃಷ್ಟಿಸುವುದಲ್ಲದೆ, ತನ್ನದೆಯಾದ ಶೈಲಿಯನ್ನು ರೂಪಿಸಿದೆ. ಹೊಸ ಹೊಸ ಕವಿಗಳ ಉದ್ಗಮದೊಂದಿಗೆ ಇಂದು ಅವರು ಎಂದು ಹೇಳದ ವಿಚಾರಗಳ ಆರಂಭವನ್ನು ತಮ್ಮ ವೈಶಿಷ್ಟ್ಯದಿಂದ ರೂಪಿಸಿದ್ದಾರೆ.
ಅಂತಹ ಅಸಾಧಾರಣರಲ್ಲಿ ಭರತ್ ದಿವಾಕರ್ ಒಬ್ಬ ಚೇಂಜ್ ಮೇಕರ್ ಕವಿಯೆಂದು ಹೇಳಬಹುದು. ಬಾಲ್ಯದಿಂದಲೇ ಬರೆಯುವ ಹವ್ಯಾಸವಿದ್ದ ಇವರು, ಬರೆವಣಿಗೆಯನ್ನೆ ತಮ್ಮ ವೃತಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ರಂಗ ಲೇಖನ, ಧಾರಾವಾಹಿಗಳಿಗೆ ಚಿತ್ರ ಕಥೆ ಆದಾಯದ ಹಾದಿಯಾದರೆ ಪದ್ಯ ತುಂಬ ವಯುಕ್ತಿಕ ಹಾಗೂ ಮನದ ಭಾವಲಹರಿಗಳ ಬಯಲು. ಮೊದಲು ನಾನು ಭರತ್ ರವರ ಕಾವ್ಯವಾಚನ ಕೇಳಿದ್ದು “ನಮ್ಮ ಪ್ರೈಡ್ “ನ “ಶಬ್ಧ” ಕಾರ್ಯಕ್ರಮದಲ್ಲಿ. ಅಂದು ಅವರ ಕಾವ್ಯವನ್ನು ಕೇವಲ ಕೇಳಲಿಲ್ಲ, ಅವರು ಹೊರಡಿಸಿದ ಶಬ್ಧಗಳೂ, ಅವರ ಆಕ್ಷೋಭನೆಯ ಸಂವೇಧನೆ ಎಲ್ಲರನ್ನು ಮೂಕವಿಸ್ಮಿತಗೊಳಿಸಿತು.
ನಾನಾಗಲೇ ಹೇಳಿದಂತೆ ಅವರು ಅಸಾಧಾರಣ ಕವಿ. ಪ್ರಸ್ತುತ ಟ್ರೆಂಡ್ ಆಗಿರುವ ಸ್ಪೋಕನ್ ವರ್ಡ್ ಪೊಯೆಟ್ರಿ ಅವರ ಆಯುಧ. ಅವರೇ ಹೇಳಿದಂತೆ “ಸ್ಪೋಕನ್ ವರ್ಡ್ ಪೊಯೆಟ್ರಿ ಎಂಬುವುದು ರಂಗಭೂಮಿ ಹಾಗು ಪದ್ಯದ ಪರಿಪೂರ್ಣ ಮದುವೆ” ಎಂಬಂತೆ ಕವಿ ತನ್ನ ಕವಿತೆಗಳನ್ನು ಓದದೇ ಅದನ್ನು ಅಭಿನಯಿಸುತ್ತಾನೆ. ಅವರ ಪದಗಳು… ಅದರ ಅಭಿನಯ… ಎಂತಹ ಮನಸ್ಸನ್ನು ಬದಲಾವಣೆಗೆ ಕಲಕಿಸುವುದು. ದೇಹದಾಕಾರದ ನಿಂದನೆ, ಲೈಂಗಿಕತೆಯ ಕಳಂಕ, ತಾರತಮ್ಯ, ಅವಹೇಳನೆ ಎಂಬ ಸೂಕ್ಷ್ಮ ವಿಷಯಗಳ ಕಾಳಗವೆ ಇವರ ಕವಿತೆಗಳ ಪ್ರಾಮುಖ್ಯತೆ.
ಕೇಳಿ ಈ ಮಹಾಕವಿಯ ಕಾಳಗದ ಕಾವ್ಯಗಾಥೆ….
– ಶಿಲೋಕ್ ಮುಕ್ಕಾಟಿ