ಆರಂಭಿಕ ನಗರದ ಒಳನೋಟ: ವಾಸ್ತುಶಿಲ್ಪಿ ಯಶಸ್ವಿನಿ ಶರ್ಮಾರವರೊಂದಿಗೆ ಮಾತುಕತೆ #Bangalore #TheEarlyCity Ad #1537-1799 #HistoryOfBangaloreArchitecture #YashaswiniSharma

ದೇಶದ ಮೂಲೆ ಮೂಲೆಯಿಂದಷ್ಟೇಯಲ್ಲದೆ ಅನ್ಯದೇಶೀಯದಿಂದಲೂ ಬೆಂಗಳೂರಿನತ್ತಿಗೆ ವಲಸೆ ಬಂದು ಇಲ್ಲಿ ನೆಲೆಗೊಳ್ಳುತ್ತಾರೆ ಜನರು. ವೇಗವಾಗಿ ಬೆಳೆಯುತ್ತಿರುವ ನಮ್ಮ ಬೆಂಗಳೂರು ತನ್ನ ತಂತ್ರಜ್ಞಾನ, ಕಟ್ಟಡಗಳು, ಉದ್ಯಾನ, ಮಾಲ್ಗಳು, ರೆಸ್ಟೋರೆಂಟ್ಗಳು, ಪಬ್ಗಳು, ಮೆಟ್ರೋ ಪೊಲಿಟಿನ್ ಸಂಸ್ಕೃತಿ ಹೀಗೆ ನಾನಾ ವಿಚಾರಗಳಿಂದ ಎಲ್ಲರನ್ನೂ ಆಕರ್ಷಿಸುತ್ತದೆ. ಬೆಂಗಳೂರು ನಗರವೂ ೧೫೩೭ರಲ್ಲಿ ನಾಡಪ್ರಭು ಕೆಂಪೇಗೌಡರ ನಿರ್ಮಾಣದಿಂದ, ಪ್ರಸ್ತುತ ಮೆಟ್ರೋ ಕಾಮಗಾರಿಕೆಯವರೆಗೆ ತನ್ನ ವಿಶಿಷ್ಟ ಲಕ್ಷಣಗಳಿಂದ ಮೆರಗುಗೊಳ್ಳುತ್ತಲೇ ಇದೆ . ನೂರು ದಶಕಗಳಿಗಿಂತಲೂ ಹೆಚ್ಚಿನ ಇತಿಹಾಸದ ಬೆರಗಿನಿಂದ ವಾಸ್ತವದ ಮೆಟ್ರೋ ಮೆರಗಿನವರೆಗೂ ನಮ್ಮ ನಗರ ರಂಜಿಸುತ್ತಿದೆ.

18118670_10210860724769086_1765367387027598226_n

ಕೆರೆ-ಕಾಲುವೆಗಳೇ ಇಲ್ಲದ ಬರಡು ಭೂಮಿಯು ಹೇಗೆ ಪಟ್ಟಣವಾಯ್ತು ? ಸಣ್ಣದಾದ ಪಟ್ಟಣ ರಾಜ್ಯದ ರಾಜಧಾನಿ ಹೇಗಾಯ್ತು ? ಇಲ್ಲಿ ಯಾಕೆ ಕೆಂಪೇಗೌಡರು ನಗರದ ನಿರ್ಮಾಣಕ್ಕೆ ಮುಂದಾದರು? ನಗರದ ವಿಭಿನ್ನ ವಿನ್ಯಾಸ ರಚನೆ, ಆಸಕ್ತಿಗಳ ವ್ಯತ್ಯಾಸ, ಕಾಲಮಾನಗಳ ಅಂತರದ ಬೆಳವಣಿಗೆ, ನಾನಾ ಸಂಸ್ಕೃತಿಗಳ ರೂಪಾಂತರಗಳ ಕೂಡಿಕೆ. ಈ ಎಲ್ಲಾ ಅಂಶಗಳು ಎಲ್ಲರನ್ನು ಕುತೂಹಲಕ್ಕೆ ಈಡೇರಿಸುವುದು. ಆ ಆಸಕ್ತಿಯೊಂದಿಗೆ ತಮ್ಮ ಕಲಿಕೆಯನ್ನು ಅನ್ವಯಿಸುತ್ತ ಬೆಂಗಳೂರು ನಗರವನ್ನು ಅಧ್ಯಯನಿಸಿ ನಗರದ ಪರಂಪರೆಯನ್ನು “Bangalore: The Early City, Ad 1537 – 1799” (ಆರಂಭಿಕ ನಗರ AD ೧೫೩೭-೧೭೯೯) ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ ವಾಸ್ತುಶಿಲ್ಪಿ ಯಶಸ್ವಿನಿ ಶರ್ಮರವರು.

13221102_10207885784517439_3077111759447469510_n

ಮೂಲತಹ ಮೈಸೂರಿನವರಾದ ಇವರು ಹುಟ್ಟಿದ್ದು ಬೆಳೆದದ್ದು ಬೆಂಗಳೂರಿನಲ್ಲೇ. ಬಿ.ಎಂ.ಎಸ್. ಕಾಲೇಜಿನಲ್ಲಿ ಬಿ.ಇ. ಆರ್ಕಿಟೆಕ್ಚರ್ ವ್ಯಾಸಂಗಿತರದ ಇವರು ಕಾರ್ಡಿಫ್ ಯೂನಿವೆರ್ಸಿಟಿಯಲ್ಲಿ ವಾಸ್ತುಶಿಲ್ಪದಲ್ಲಿ ಎಂ. ಫಿಲ್.ಪೂರ್ಣಗೊಳಿಸಿದ್ದಾರೆ. ಯಶಸ್ವಿನಿಯವರು ತಮ್ಮ ಬಿ.ಇ. ವ್ಯಾಸಂಗ ಮಾಡುತಿರುವಾಗ ತಮ್ಮ ನಿವಾಸವಿದ್ದ ಕುಮಾರಪಾರ್ಕ್ ನಿಂದ ಬಸವನಗುಡಿಗೆ ತೆರುಳುವ ವೇಳೆಯಲ್ಲಿ ಹಾದುಹೋಗುತಿದ್ದ ಎಣೆಯಿಲ್ಲದ ಚೌಕಟ್ಟುಗಳು, ವಿಭಿನ್ನ ಕಟ್ಟಡಗಳು, ವಿವಿಧ ಸಂಸ್ಕೃತಿಗಳ ಆಚಾರ ವಿಚಾರಗಳು ಇವರನ್ನು ಸದಾ ವಿಸ್ಮಯಿಸುತ್ತಿದ್ದವು. ಆ ಸೋಜಿಗವೇ ಇವರ ಪುಸ್ತಕ್ಕಕೆ ಪಾವಟಣಿಗೆಯಾಯ್ತು.

ಯಶಸ್ವಿನಿಯವರು ರೇಡಿಯೋ ಆಕ್ಟಿವ್ನೊಂದಿಗೆ ತಮ್ಮ ಕಲಾತ್ಮಕ ಬದುಕಿನ ಪಯಣ, ಅವರ ಶಿಲ್ಪಕಲೆಯ ಕೌಶಲ್ಯ, ಅವರ ಬರೆವಣಿಗೆಗೆ ಸಿಕ್ಕಿದ ಸ್ಫೂರ್ತಿ ಎಲ್ಲವನ್ನು ಹಂಚಿಕೊಳ್ಳುತ್ತಾರೆ. RJ ವಿಜಯಾರವರೊಂದಿಗೆ ನಗರದಲ್ಲಿದ್ದ ಪರಂಪರೆ,ಬೆಂಗಳೂರಿನಲ್ಲಿ ಆಗಿರುವ ಬದಲಾವಣೆಗಳು, ಆ ಬದಲಾವಣೆಗಳ ಕೆಡುಕು ಒಳಿತುಗಳೂ! ಹಾಗೆ, ಅವರು ಬರೆದ ಪುಸ್ತಕದ ಹಿಂದಿದ್ದ ಶ್ರಮ, ಅನ್ವೇಷಣೆ ಎಲ್ಲವನ್ನು ಬಿಚ್ಚಿಡುತ್ತಾರೆ. ಹೀಗೆ ಮುಂದೆ ಯಶಸ್ವಿನಿಯವರು ರೇಡಿಯೋ ಆಕ್ಟಿವ್ನಲ್ಲಿ ನಮ್ಮ ಬೆಂಗಳೂರಿನ ರಚನೆಯ ಪರಂಪರೆಯ ವಿಚಾರಗಳನ್ನು ಎಪಿಸೋಡ್ಗಳಾಗಿ ತಿಳಿಸಲಿದ್ದಾರೆ.

18447001_10211027275252744_4819138000232156963_n

ಕೇಳ್ತಾಇರಿ ರೇಡಿಯೋ ಆಕ್ಟಿವ್ CR 90.4 MHz, ಬೆಂಗಳೂರಿನ ಮೊಟ್ಟ ಮೊದಲ ಸಮುದಾಯ ಭಾನುಲಿ ಕೇಂದ್ರ. ಇಂತಹ ಇನ್ನಷ್ಟು ಸ್ಪೂರ್ತಿದಾಯಕ ಕಥೆಗಳಿಗಾಗಿ ಟ್ಯೂನ್ ಆಗಿರಿ, ಬದುಕಿನಲ್ಲಿ ಆಕ್ಟಿವ್ ಆಗಿರಿ.

– ಶಿಲೋಕ್ ಮುಕ್ಕಾಟಿ .

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s