ಅದು ೧೬ನೇ ಶತಮಾನ. ಯಲಹಂಕ ನಾಡಪ್ರಭು ಕೆಂಪೇಗೌಡರ ಸಂಕಲ್ಪದಿಂದ ಬೇಗೂರು ಎಂಬ ಹಳ್ಳಿಯಿಂದ ಪಟ್ಟಣದ ನಿರ್ಮಾಣದ ಉಪಕ್ರಮವಾಯಿತು. ಚೋಳರ ಆಳ್ವಿಕೆಯಲ್ಲಿ ಮಂಡಲದ ಸ್ಥೂಲಕಲ್ಪನೆಯಲ್ಲಿ ಬೇಗೂರು ಪ್ರಧಾನ್ಯತೆಯನ್ನು ಹೊಂದುವುದು. ಪೇಟೆ ಸುತ್ತಾ ಒಂದು ಕೋಟೆ, ಕೋಟೆ ಸುತ್ತಾ ಒಂದು ಕಂದಕ. ಆ ಪೇಟೆಯ ಸುತ್ತಲ ರಕ್ಷಾ ಕವಚವಾಗಿ ನಂಧಿದುರ್ಗ ಸಾವನದುರ್ಗ ಎಂಬ ದುರ್ಗಗಳು, ಹಾಗೆ ದಿಬ್ಬಗಳು, ಗುಡ್ಡಗಳು ದಟ್ಟವಾದ ಪೊದೆಗಳ ಭದ್ರತೆ ಅದಕೆ. ಪಟ್ಟಣಕ್ಕೆ ಎಂಟು ಕಣಿವೆಮಾರ್ಗಗಳು. ಪೇಟೆಯ ಕೋಟೆಗೆ ಎರಡು ಮುಖ್ಯ ದ್ವಾರ. ಪೆಟ್ಟೆಯ ಸುತ್ತಲೂ ಕಾವಲುಗೋಪುರಗಳು ಕಟ್ಟಲಾಯಿತು.
ನೀರಿನ ಸಂಪನ್ಮೂಲತೆಯೇ ಇರದ ನಾಡಲ್ಲಿ ಮಳೆ ಕೊಯ್ಲಿನ ಶೇಖರಣೆಯಿಂದ ನೀರಿನ ಉತ್ಪನ್ನತೆಯಾಯಿತು. ಧರ್ಮಾಅಂಬುಧಿ, ಸಂಪಂಗಿ, ಕಾರಂಜಿ, ಸಿದ್ಧಿಕಟ್ಟೆ, ಚಲ್ಲಘಟ್ಟ, ಅಕ್ಕಿತಿಮನಹಳ್ಳಿ ಎಂಬ ಹಲವು ಕೆರೆಗಳ ರಚನೆಯಾಯಿತು. ಜಮೀನುಗಳೂ ಹುಟ್ಟಿಕೊಂಡವು. ಪಟ್ಟಣದ ಸಮೃದ್ಧಿಗೆ ಬೇಕಾದ ಹಸಿರು ಸಿರಿ ಒದಗಿತು. ಯಲಹಂಕ ನಾಡಪ್ರಭು ಕೆಂಪೇಗೌಡರು ದೇಶದ ಮೂಲೆ ಮೂಲೆಗಳಿಂದ ವ್ಯಾಪಾರಿಗಳನ್ನು ಆಮಂತ್ರಿಸುತ್ತಾರೆ. ವ್ಯಾಪಾರಿಗಳ ವ್ಯವಹಾರಗಳಿಗೆ ಹೆದ್ದಾರಿಯಾದ ತಧಿಗೈವಲಿ ಅವಿಶ್ರಾಂತಗೊಳ್ಳುವುದು. ವ್ಯವಸಾಯ ವ್ಯಾಪಾರಗಳ ನಿರತ ಚಟುವಟಿಕೆ ಪಟ್ಟಣದ ವೇಗದ ಬೆಳವಣಿಗೆಗೆ ಕಾರಣವಾಯಿತು.
ಬಂದ ವ್ಯಾಪಾರಿಗಳ ಹಲವು ಸಮುದಾಯವು ಇಲ್ಲೇ ಉಳಿದರು. ತಮ್ಮ ತಮ್ಮ ಸರಕುಗಳ ಆದಾರದ ಮೇರೆಗೆ ತಮ್ಮದೆಯಾದ ಪುಟ್ಟ ಪುಟ್ಟ ಪೇಟೆಗಳನ್ನು ಹುಡಿಕೊಳ್ಳುವರು. ಈ ರೀತಿಯಾಗಿ ಅಕ್ಕಿಪೇಟೆ, ಅರಳೇಪೇಟೆ, ಬಳೇಪೇಟೆ, ರಾಗಿಪೇಟೆ, ಸುಣಕಲ್ಪೇಟೆ, ಕುಂಬಾರಪೇಟೆ ಎಂಬ ಅನೇಕ ಚಿಕ್ಕ ಪೇಟೆಗಳು ಹುಟ್ಟಿಕೊಳ್ಳುತ್ತವೆ. ಆ ಸಮುದಾಯಗಳು ಸ್ವಪರ್ಯಾಪ್ತತೆಗಾಗಿ ದೇವಸ್ಥಾನಗಳನ್ನೂ ಕಟ್ಟಿಕೊಳ್ಳುತ್ತಾರೆ. ಹೀಗೆ ಬೆಂಗಳೂರು ಎಂಬ ನಗರವು ಬೃಹದಾಕಾರವಾಗಿ ಬೆಳೆಯುತ್ತದೆ.
ಗಂಗಾ, ಹೊಯ್ಸಳರು, ಚೋಳರು, ಕೆಂಪೇಗೌಡರು, ಸುಲ್ತಾನರು, ವೊಡೆಯರು ಹಾಗೆ ಬ್ರಿಟಿಷರ ಆಳ್ವಿಕೆಯಲ್ಲಿ ವಿಶಿಷ್ಟವಾಗಿ ವಿನ್ಯಾಸಗೊಳ್ಳುವುದು. ಹಲವು ಆಧಿಪತ್ಯದ ಆಳ್ವಿಕೆಯ ಬೆಂಗಳೂರು… ಪ್ರತಿ ಆಧಿಪತ್ಯದ ಸಂಸ್ಕೃತಿಗಳ ಹಲವು ಅಂಶಗಳನ್ನು ತನ್ನೊಳೊಗೆ ಹುಡಿಕೊಳ್ಳುವುದು. ಶ್ರೀ ರಂಗನಾಥ ದೇವಸ್ಥಾನದ ಉಗಮದಿಂದ ವಿಧಾನಸೌಧದವರೆಗೆ ಶ್ರೀಮಂತ ಇತಿಹಾಸವನ್ನು ನಮ್ಮ ಬೆಂಗಳೂರು ಹಾಡುತದೇ.
ಈ ನಮ್ಮ ಬೆಂಗಳೂರಿನ ವಿನ್ಯಾಸದ ಇತಿಹಾಸವನ್ನು, ಬೆಂಗಳೂರಿನ ರಚನೆಯ ಪರಂಪರೆಯ ವಿಚಾರಗಳನ್ನು ವಾಸ್ತುಶಿಲ್ಪಿಯಾದ ಯಶಸ್ವಿನೀ ಶರ್ಮರವರು RJ ವಿಜಿಯರವರೊಂದಿಗೆ ತಿಳಿಸಿದ್ದಾರೆ.
ಕೇಳ್ತಾಇರಿ ರೇಡಿಯೋ ಆಕ್ಟಿವ್ CR 90.4 MHz, ಬೆಂಗಳೂರಿನ ಮೊಟ್ಟ ಮೊದಲ ಸಮುದಾಯ ಭಾನುಲಿ ಕೇಂದ್ರ. ಇಂತಹ ಇನ್ನಷ್ಟು ಸ್ಪೂರ್ತಿದಾಯಕ ಕಥೆಗಳಿಗಾಗಿ ಮತ್ತು ನಮ್ಮ ಬೆಂಗಳೂರು, ಬೆಂಗಳೂರಿನ ಸಮುದಾಯಗಳ ವಿಚಾರಪೂರ್ಣ ಮಾಹಿತಿಗಳಿಗೆ ಟ್ಯೂನ್ ಆಗಿರಿ, ಬದುಕಿನಲ್ಲಿ ಆಕ್ಟಿವ್ ಆಗಿರಿ.
– ಶಿಲೋಕ್ ಮುಕ್ಕಾಟಿ .
Music Credits: http://www.bensound.com/