ಕಾರ್ಯಕ್ರಮ ನಡೆದ ದಿನಾಂಕ: 9ನೇ ಮೇ ರಿಂದ 12ನೇ ಮೇ 2017
ಆಯೋಜಕರು: ಮೈ ಚಾಯ್ಸ್ ಫೌಂಡೇಷನ್, ರೆಡ್ ಅಲರ್ಟ್
ಭಾಗವಹಿಸಿದವರು: ನಾಗಸಿಂಹ ಜಿ ರಾವ್, ಸಿಆರ್ಟಿ, ವೆಂಕಟೇಶ್ ಸಿಆರ್ಟಿ, ವೆಂಕಟೇಶ್.ಡಿ ರೇಡಿಯೋ ಆಕ್ಟೀವ್ 90.4 ಸಮುದಾಯ ಬಾನುಲಿ ಕೇಂದ್ರ, ಮತ್ತು ಕರ್ನಾಟಕದ ವಿವಿಧ ಜಿಲ್ಲೆಗಳಿಂದ ವಿವಿಧ ಸ್ವಯಂ ಸೇವಾ ಸಂಸ್ಥೆಗಳು.
ಕಾರ್ಯಕ್ರಮ ನಡೆದ ಸ್ಥಳ: ತೆಲಂಗಣ ರಾಜ್ಯ
ಕಾರ್ಯಕ್ರಮದ ವಿವರ: ಭಾರತದಲ್ಲಿ ಅಕ್ರಮ ಮಾನವ ಸಾಗಾಣೆಯನ್ನು ತಡೆಯುವುದು, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತದಲ್ಲಿ ಹುಟ್ಟಿಕೊಂಡಿರುವುದು ಆಪರೇಷನ್ ರೆಡ್ ಅಲರ್ಟ್ . ಇದರ ಉದ್ದೇಶ 2025 ಹೊತ್ತಿಗೆ ದೊಡ್ಡ ಮಟ್ಟದಲ್ಲಿ ಹೆಣ್ಣು ಮಕ್ಕಳ ಅಕ್ರಮ ಸಾಗಾಣಿಕೆಯನ್ನು ತಡೆಯುವುದು.
ಯಾವ ಸೂಕ್ಷ್ಮ ಪ್ರದೇಶಗಳಿವೆಯೋ ಆ ಹಳ್ಳಿಗಳಲ್ಲಿ 2 ದಿನಗಳ ಕಾರ್ಯಕ್ರಮವನ್ನು ಕೈಗೊಳ್ಳುವುದು ಈ ಕಾರ್ಯಕ್ರಮಗಳಲ್ಲಿ ಆ ಹಳ್ಳಿಯ ತಂದೆ, ತಾಯಿ, ಯುವಕರು, ಯುವತಿಯರು, ಸ್ತ್ರೀ ಶಕ್ತಿ ಸಂಘಗಳು, ಹಾಗೂ ಶಾಲಾ ಮಕ್ಕಳಿಗೆ ಜಾಗೃತಿ ತರಬೇತಿ ನೀಡುವುದು. ಬೀದಿ ನಾಟಕ ಮತ್ತು ಸಾಕ್ಷಚಿತ್ರ ಪ್ರದರ್ಶನ ಮಾಡುವುದು. ಆ ಹಳ್ಳಿಯಲ್ಲಿ ಕಾಣೆಯಾದವರ ಬಗ್ಗೆ ಮಾಹಿತಿ ನೀಡಲು ಒಬ್ಬ ವ್ಯಕ್ತಿಯನ್ನು ನೇಮಕ ಮಾಡಿ ಅವರಿಗೆ ‘ರಕ್ಷಕ’ ಎಂದು ಹೆಸರು ನೀಡುವುದು.
ಆಪರೇಷನ್ ರೆಡ್ ಅಲರ್ಟ್ ಸಹಾಯವಾಣಿ: 18004198588 ಈ ಸಹಾಯವಾಣಿಗೆ ಕರೆ ಮಾಡಿ ತಿಳಿಸುವುದು.
ಭಾರತದಲ್ಲಿ ಅಕ್ರಮ ಮಾನವ ಸಾಗಾಣೆ:
- ಕೌಟುಂಬಿಕ ದೌರ್ಜನ್ಯದಲ್ಲಿ ಭಾರತ 19 ನೇ ಸ್ಥಾನದಲ್ಲಿದೆ.
- 22 ನಿಮಿಷಕ್ಕೆ ಒಬ್ಬ ಮಹಿಳೆ ದೌರ್ಜನ್ಯಕ್ಕೆ ಒಳಗಾಗುತ್ತಾಳೆ. (ದೈಹಿಕ, ಮಾನಸಿಕ, ಲೈಂಗಿಕ, ಆಥರ್ಿಕ ಮತ್ತು ಭಾವನಾತ್ಮಕ ದೌರ್ಜನ್ಯಗಳಿಗೆ ಮಹಿಳೆ ಒಳಗಾಗುತ್ತಾಳೆ).
- ಭಾರತದ ಅಸ್ಸಾಂ, ಬಿಹಾರ್, ವೆಸ್ಟ್ ಬೆಂಗಾಳ್ ಈ ರಾಜ್ಯಗಳಲ್ಲಿ ಅತೀ ಹೆಚ್ಚಿನ ಕಾಣೆಯಾದ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
- ಪ್ರತೀ 8 ನಿಮಿಷಕ್ಕೆ ಒಬ್ಬ ವ್ಯಕ್ತಿ ಕಾಣೆಯಾಗುತ್ತಾರೆ.
- ಭಾರತದಲ್ಲಿ ಪ್ರತೀ ವರ್ಷ ಒಂದು ಲಕ್ಷ ಜನ ಕಾಣೆಯಾಗುತ್ತಾರೆ.
- ವೆಸ್ಟ್ ಬೆಂಗಾಳ್ನಲ್ಲಿ 83,711 ಮಕ್ಕಳು ಕಾಣೆಯಾಗಿದ್ದಾರೆ.
- ಕಾಣೆಯಾದ ಮಹಿಳೆಯರನ್ನ ವೇಶ್ಯವಾಟಿಕೆಗೆ ನೂಕಲಾಗುತ್ತಿದೆ.
-ವೆಂಕಟೇಶ್.ಡಿ
ರೇಡಿಯೋ ಆಕ್ಟೀವ್ 90.4 ಸಮುದಾಯ ಬಾನುಲಿ ಕೇಂದ್ರ, ಬೆಂಗಳೂರು