ಸ್ಕಿಜೋಫ್ರಿನಿಯಾ ಕಾಯಿಲೆಯ ಬಗ್ಗೆ
ಡಾ/ ಹೆಚ್.ಚಂದ್ರಶೇಖರ್ ರವರು ಇಂದಿನ ಮನೋಚರ್ಚ ಕಾರ್ಯಕ್ರಮದಲ್ಲಿ ಸ್ಕಿಜೋಫ್ರಿನಿಯಾ ವಿಷಯದ ಬಗ್ಗೆ ಮಾತಾನಾಡಿದ್ದಾರೆ.
ಕೇಳುಗರೇ ಸ್ಕಿಜೋಫ್ರಿನಿಯಾ ಕಾಯಿಲೆ ಯಾರಿಗೆ ಬೇಕಾದರೂ ಬರಬಹುದು, ಸ್ಕಿಜೋಫ್ರಿನಿಯಾ ಎನ್ನುವುದು ಸಾಮಾನ್ಯವಾಗಿ ಬರುವ ಒಂದು ಮಾನಸಿಕ ಕಾಯಿಲೆ. ಈ ಕಾಯಿಲೆಯಲ್ಲಿ ಮುಖ್ಯವಾಗಿ ಆಲೋಚನೆ, ಬಾವನೆಗಳು ಮತ್ತು ಪಂಚೇಂದ್ರಿಯಗಳು, ಸಂವೇದನಾ ಕ್ರಿಯೆ ಏರುಪೇರಾಗಿರುತ್ತದೆ.
ಸ್ಕಿಜೋಫ್ರಿನಿಯಾ ಕಾಯಿಲೆಯ ಮುಖ್ಯ ಲಕ್ಷಣಗಳು –
* ಸ್ಕಿಜೋಫ್ರಿನಿಯಾ ರೋಗಿಯ ಆಲೋಚನೆ ಸ್ವಷ್ಟವಾಗಿರುವುದ್ದಿಲ್ಲ, ತರ್ಕಬದ್ದವಾಗಿರುವುದ್ದಿಲ್ಲ, ಅಸಂಬ್ಬದ್ದವಾಗಿರುತ್ತದೆ, ಅರ್ಧಹೀನವಾಗಿರುತ್ತದೆ. ವಿಚಿತ್ರವಾಗಿರುತ್ತದೆ. ಆತ ವ್ಯಕ್ತಪಡಿಸುವ ನಂಬಿಕೆಗಳಿಗೆ ಯಾವುದೇ ಆಧಾರವಿರುವುದಿಲ್ಲ, ವಿನಾಕಾರಣ ಆತ ಸಂಶಯಪೀಡಿತನಾಗಬಹುದು.
* ಭಾವನೆಗಳ ಏರು ಪೇರು – ಸ್ಕಿಜೋಫ್ರಿನಿಯಾ ಕಾಯಿಲೆಯಿಂದ ನರಳುತ್ತಿರುವ ವ್ಯಕ್ತಿಗೆ ವಿಪರೀತ ಕೋಪ, ದುಃಖ,ಸಂತ್ತೋಷ, ವಿನಾಕಾರಣ ನಗುವುದು, ಅಳುವುದು ಅಧವಾ ಯಾವುದೇ ಭಾವನೆ ತೋರಿಸದೆ ನಿಲರ್ಿಪ್ತನಂತಿರಬಹುದು.
* ಅಸಹಜ ಹಾಗು ವಿಚಿತ್ರ ಅನುಭವಗಳು ಉದಾಹರಣೆಗೆ: ಹಗಲಿನಲ್ಲೂ ಹಗ್ಗವನ್ನು ಕಂಡು ಹಾವೆಂದು ಭೀತನಾಗಬಹುದು, ನೆರಳನ್ನು ಕಂಡು ಭೂತ/ಕಳ್ಳ ಎಂದು ತಿಳಿದುಕೊಳ್ಳುವುದು.
* ದೈಹಿಕ ಕ್ರಿಯೆಗಳಲ್ಲಿ ಏರುಪೇರು – ಮನಸ್ಸಿಗೆ ಬಂದರೆ ತಿನ್ನುವುದು ಇಲ್ಲದಿದ್ದರೆ ದಿನಗಟ್ಟಲೇ ಉಪವಾಸವಿರಬಹುದು.
ಲಭ್ಯವಿರುವ ಚಿಕಿತ್ಸಾ ಕ್ರಮಗಳು – ಈ ಕಾಯಿಲೆಗೆ ಔಷಧ ಕೊಡಲೇಬೇಕು. ಮಾತ್ರೆ ಸೂಜಿಮದ್ದಿನ ರೂಪದಲ್ಲಿ ಅನೇಕ ಬಗೆಯ ಶಮನಕಾರಿ ಚುಚ್ಚುಮದ್ದುಗಳಿವೆ.
ಸ್ಕಿಜೋಫ್ರಿನಿಯಾ ರೋಗಿ ಬೇಗ ಮತ್ತು ಸಂಪೂರ್ಣವಾಗಿ ಗುಣಮುಖನಾಗಲು ಪ್ರೇರೇಪಿಸುವ ಅಂಶಗಳು –
ಅದಷ್ಟು ಬೇಗ ಚಿಕಿತ್ಸೆ
ವೈದ್ಯರನ್ನು ಆಗಿಂದಾಗ್ಗೆ ಕಂಡು ಸಲಹೆ ಮಾರ್ಗದರ್ಶನ ಪಡೆಯಬಹುದು.
ಮನೆಯವರಿಂದ ಪ್ರೀತಿ, ವಿಶ್ವಾಸ, ಆಸರೆ
ಕೆಲಸ, ಮನೊರಂಜನೆ – ರೋಗಿಯ ಸಾಮಧ್ರ್ಯಕ್ಕೆ ಅನುಗುಣವಾಗಿ, ಆತನ ಆತ್ಮವಿಶ್ವಾಸ,ಸ್ವಾವಲಂಬನೆ ಪ್ರೋತ್ಸಾಹಿಸತಕ್ಕಂತಹ ಕೆಲಸ.
ಮಧ್ಯ, ಮತ್ತು ಮಾದಕ ವಸ್ತುಗಳನ್ನು ಸೇವಿಸಬರದು .
ಸ್ಕಿಜೋಫ್ರಿನಿಯಾ ರೋಗಿ ಯಾವುದೇ ರೀತಿ ಆಹಾರ ಪಧ್ಯ ಮಾಡಬೇಕಿಲ್ಲ.
ಕಿವಿ ಮಾತು – ಮಾನಸಿಕ ರೋಗದ ಬಗ್ಗೆ ಮುಕ್ತವಾಗಿ ಚಚರ್ಿಸುವುದು. ಮಾನಸಿಕ ರೋಗದ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡುವುದು. ಮಾನಸಿಕ ರೋಗದ ಬಗ್ಗೆ ಜನರಲ್ಲಿರುವ ತಪ್ಪು ತಿಳಿವಳಿಕೆ ಮತ್ತು ನಕಾರಾತ್ಮಕ ಭಾವನೆಗಳನ್ನು ಹೋಗಲಾಡಿಸುವುದು. ಮಾನಸಿಕ ರೋಗಿಗಳಿಗೆ ಸಹಾಯ ಸಹಕಾರ ನೀಡುವುದು.
ಕೇಳುಗರೇ ಸ್ಕಿಜೋಫ್ರಿನಿಯಾ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಲು ಕೇಳಿ ರೇಡಿಯೋ ಆಕ್ಟಿವ್ ಛಿಡಿ 90.4 ಟದ ಆಗಿ ಆಕ್ಟಿವ್.
ಪ್ರತಿ ಗುರುವಾರ ಬೆಳ್ಳಗೆ 10.30 ರಿಂದ 11.00 ಕ್ಕೆ ಮನೋಚರ್ಚ ಕಾರ್ಯಕ್ರಮದಲ್ಲಿ ಮಾನಸಿಕ ಕಾಯಿಲೆಗಳ ವಿಷಯದ ಬಗ್ಗೆ ಕೇಳಿ .
– ಪದ್ಮಪ್ರಿಯಾ (ರೇಡಿಯೊ ಜಾಕಿ)