ಡಾ. ಎಚ್. ಚಂದ್ರಶೇಖರ್ ರವರು ಮತ್ತು ನಿಮ್ಮ ನೆಚ್ಚಿನ ರೇಡಿಯೋ ಜಾಕಿ ಪದ್ಮಪ್ರಿಯ ಮನೋಚರ್ಚ ರ್ಕಾರ್ಯಕ್ರಮದಲ್ಲಿ ಖನ್ನತೆಯ ಬಗ್ಗೆ ಸಂಪರ್ೂಣ ಮಾಹಿತಿಯನ್ನು ನೀಡಿದ್ದಾರೆ.

10151407_10152336922093764_86846738_n (1)

ಡಾ/ ಹೆಚ್.ಚಂದ್ರಶೇಖರ್ ರವರು ಇಂದಿನ ಮನೋಚರ್ಚ ಕಾರ್ಯಕ್ರಮದಲ್ಲಿ ಖಿನ್ನತೆ ವಿಷಯದ ಬಗ್ಗೆ ಮಾತಾನಾಡಿದ್ದಾರೆ.

ಖಿನ್ನತೆ ಎಂದರೇನು ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರಲ್ಲಿ ಯಾರಾದರು ದೀರ್ಘಕಾಲದಿಂದ ದುಃಖದಲ್ಲಿ ಅಥವಾ ಸುಸ್ತಾದಂತೆ ಇರುವರೆ? ಇವರು ಒಂಟಿಯಾಗಿರುವುದು, ನಿತ್ಯದ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಂಡಿರುವುದು, ಸರಿಯಾಗಿ ಊಟ ತಿಂಡಿ ಮಾಡದೇ ಇರುವುದು ಅಥವಾ ಆಗಾಗ ಕೆಲಸಕ್ಕೆ ಹೋಗದಿರುವುದನ್ನು ನೀವು ಗಮನಿಸಿರಬಹುದು. ಎಲ್ಲ ಲಕ್ಷಣಗಳು ವ್ಯಕ್ತಿಗೆ ಖಿನ್ನತೆ ಇರಬಹುದೆಂಬ ಸೂಚನೆಯಾಗಿದೆ.

ಕೆಲವು ಬೇಸರದ ಘಟನೆಗಳು ನಡೆದಾಗ ದುಃಖವಾಗುವುದು ಸಹಜ. ಆದರೆ, ಭಾವನೆ ತುಂಬಾ ದಿನಗಳವರೆಗೆ ಇದ್ದರೆ (ಎರಡು ವಾರಗಳಿಗಿಂತ ಹೆಚ್ಚು) ಅಥವಾ ಮತ್ತೆ ಮತ್ತೆ ಕಾಣಿಸಿಕೊಂಡು ದೈನಂದಿನ ಜೀವನ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರಿದರೆ ಇದು ಕ್ಲಿನಿಕಲ್ ಖಿನ್ನತೆಯ (ಡಿಪ್ರೆಷನ್) ಚಿಹ್ನೆಯಾಗಿರುತ್ತದೆ. ಇದಕ್ಕೆ ಚಿಕಿತ್ಸೆ ಅಗತ್ಯ.

ಖಿನ್ನತೆಯು ವ್ಯಕ್ತಿಯ ಯೋಚನೆ, ಭಾವನೆ, ವರ್ತನೆ, ಸಂಬಂಧಗಳು, ಕೆಲಸ ಮಾಡುವ ಸಾಮರ್ಥ್ಯ ಎಲ್ಲದರ ಮೇಲೆ ಪರಿಣಾಮ ಬೀರುತ್ತದೆ. ತೀವ್ರವಾದ ಖಿನ್ನತೆ ಇರುವ ವ್ಯಕ್ತಿ ಆತ್ಮಹತ್ಯೆಯ ಪ್ರಯತ್ನ ಕೂಡ ಮಾಡಬಹುದು.

ಗಮನಿಸಿ: ಖಿನ್ನತೆ ಎಂದರೆ ದುರ್ಬಲತೆ ಅಥವಾ ಮಾನಸಿಕ ಅಸ್ಥಿರತೆ ಎಂದಲ್ಲ. ಇದು ಡಯಾಬಿಟೀಸ್ ಅಥವಾ ಹೃದಯ ಸಮಸ್ಯೆಯಂತೆಯೇ ಒಂದು ಖಾಯಿಲೆ. ಖಿನ್ನತೆ ಯಾರಿಗಾದರೂ, ಯಾವ ವಯಸ್ಸಿನಲ್ಲಾದರೂ ಕಾಣಿಸಿಕೊಳ್ಳಬಹುದು.

ಖಿನ್ನತೆಯ ಕೆಲವು ಲಕ್ಷಣಗಳು ಹೀಗಿವೆ:

 • ಹೆಚ್ಚಿನ ಸಮಯದಲ್ಲಿ ದುಃಖ ಅಥವಾ ಬೇಸರದಲ್ಲಿರುವುದು.
 • ದೈನಂದಿನ ಚಟುವಟಿಕೆಗಳನ್ನು ನಿಭಾಯಿಸಲು ಕಷ್ಟ ಪಡುವುದು ಮತ್ತು ಅವುಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು. ದಿನವಿಡೀ ಸುಸ್ತಾದಂತೆ ಅನಿಸುವುದು. ಮುಂಚೆ ಇಷ್ಟ ಪಟ್ಟು ಮಾಡುತ್ತಿದ್ದ ಕೆಲಸಗಳಲ್ಲಿ ಈಗ ನಿರಾಸಕ್ತಿಯ ಭಾವ.
 • ಏಕಾಗ್ರತೆಯ ಕೊರತೆ, ಯೋಚಿಸಲು ಅಥವಾ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗುವುದು (ಉದಾ: ಹವ್ಯಾಸ, ಅಧ್ಯಯನದ ಮೇಲೆ ಗಮನ ನೀಡಲು ಕಷ್ಟ, ಇತ್ಯಾದಿ).
 • ಆತ್ಮವಿಶ್ವಾಸ ಮತ್ತು ಆತ್ಮಗೌರವ ಕಡಿಮೆಯಾಗುವುದು.
 • ತನ್ನ ಬಗ್ಗೆ, ಜೀವನದ ಬಗ್ಗೆ ಹಾಗೂ ಭವಿಷ್ಯದ ಬಗ್ಗೆ ಋಣಾತ್ಮಕ ಭಾವನೆ.
 • ಹಸಿವಾಗದಿರುವುದು ಅಥವಾ ಅತಿಯಾಗಿ ತಿನ್ನುವುದು.
 • ಹಿಂದಿನ ಸೋಲುಗಳಿಗೆ ತನ್ನನ್ನೇ ದೂಷಿಸಿಕೊಳ್ಳುವುದುಅಪರಾಧಿ ಭಾವ; ತಾನು ಅನುಪಯುಕ್ತ ಎಂಬ ಭಾವನೆ.
 • ಓದು, ಕೆಲಸ, ಮತ್ತು ಇತರ ಕಾರ್ಯಗಳಲ್ಲಿ ನಿರಾಸಕ್ತಿ.
 • ಸರಿಯಾಗಿ ನಿದ್ರೆ ಬಾರದಿರುವುದು ಅಥವಾ ನಿದ್ರೆ ಮಾಡಲು ಸಾಧ್ಯವೇ ಆಗದಿರುವುದು.
 • ಲೈಂಗಿಕ ವಿಚಾರ/ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಳೆದುಕೊಳ್ಳುವುದು
 • ತಲೆ ನೋವು, ಕತ್ತು ನೋವುಸೆಳೆತ ಹೀಗೆ ದೇಹದ ವಿವಿಧ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುವುದು
 • ಆತ್ಮಹತ್ಯೆ ಅಥವಾ ಸ್ವಯಂ ಹಾನಿಯ ಬಗ್ಗೆ ಯೋಚಿಸುವುದು

ನಿಮಗೆ ಪರಿಚಯವಿರುವ ವ್ಯಕ್ತಿಗಳಲ್ಲಿ ಲಕ್ಷಣಗಳು ಕಂಡರೆ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಲು ಅವರನ್ನು ಪ್ರೋತ್ಸಾಹಿಸಿ.

ಖಿನ್ನತೆಗೆ ಕಾರಣವೇನು?

       ವಂಶವಾಹಿಗಳು, ಜೀವನದಲ್ಲಿನ ಒತ್ತಡಅಹಿತಕರ ಘಟನೆಗಳು ಹೀಗೆ ಹಲವು ಕಾರಣಗಳಿಂದ ಖಿನ್ನತೆ ಕಾಣಿಸಿಕೊಳ್ಳಬಹುದು

 • ಜೀವನದ ಒತ್ತಡಗಳುಕೆಲಸಕೌಟುಂಬಿಕ ಅಥವಾ ವೈವಾಹಿಕಸಮಸ್ಯೆಗಳು, ಹಣಕಾಸಿನ ವಿಚಾರಗಳು ಒತ್ತಡ ತರುವ ಸಾಮಾನ್ಯ ವಿಷಯಗಳಾಗಿವೆ
 • ದೈಹಿಕ ಆರೋಗ್ಯ ಸಮಸ್ಯೆಗಳು: ಥೈರಾಯ್ಡ್, ಮಧುಮೇಹ ಮುಂತಾದದೀರ್ಘಕಾಲದ ಖಾಯಿಲೆಗಳನ್ನು ನಿಭಾಯಿಸುವಾಗ ವ್ಯಕ್ತಿ ಖಿನ್ನತೆಗೆ ಒಳಗಾಗಬಹುದು. ಹಾಗಾಗಿ  ಹಿಂದೆ ಪತ್ತೆಯಾಗದ ಅನಾರೋಗ್ಯದ ಬಗ್ಗೆ ಕೂಡ ಮನೋವೈದ್ಯರು ಪರೀಕ್ಷೆ ಮಾಡಬಹುದು. ಗಂಭೀರವಾದ ಹೃದಯ ಸಮಸ್ಯೆ, ಕ್ಯಾನ್ಸರ್ ಅಥವಾ ಎಚ್..ವಿ. ಏಡ್ಸ್ ಖಾಯಿಲೆಗಳಿಂದ ಬಳಲುತ್ತಿರುವವರು ಅವುಗಳನ್ನು ಒಪ್ಪಿಕೊಂಡು ಎದುರಿಸಲಾಗದೆ  ಖಿನ್ನತೆಗೆ ಒಳಗಾಗಬಹುದು.
 • ವ್ಯಕ್ತಿತ್ವ: ವ್ಯಕ್ತಿತ್ವಅಥವಾ ದೇಹದ ಬಗ್ಗೆ ಚಿಂತೆ (ಅತಿಯಾಗಿ ದಪ್ಪಗಿರುವುದು, ತೆಳ್ಳಗಿರುವುದು, ಉದ್ದವಿರುವುದು, ಕುಳ್ಳಿರುವುದು ಇತ್ಯಾದಿ), ಎಲ್ಲದರಲ್ಲಿಯೂ ಪರಿಪೂರ್ಣತೆಯನ್ನು ಅಪೇಕ್ಷಿಸುವುದು, ಶಾಲೆ, ಕಾಲೇಜು ಹಾಗೂ ಕೆಲಸದ ಸ್ಥಳದಲ್ಲಿ ಒತ್ತಡಅನಾರೋಗ್ಯಕರ ಸ್ಪರ್ಧೆ ಮುಂತಾದ ಕಾರಣಗಳಿಂದ ಖಿನ್ನತೆ ಬರಬಹುದು. ಎಲ್ಲಾ ಕಾರಣಗಳು ಅಥವಾ ಇವುಗಳಲ್ಲಿ ಕೆಲವು ಕಾರಣಗಳು ಒಗ್ಗೂಡಿ ಖಿನ್ನತೆಗೆ ದಾರಿಮಾಡಿಕೊಡುತ್ತವೆ ಎಂದು ಸಂಶೋಧನೆಗಳು ಹೇಳುತ್ತವೆ.
 • ಮದ್ಯಪಾನ ಅಥವಾ ಡ್ರಗ್ ಚಟ:ಮಾದಕ ವಸ್ತುಗಳು ನಮ್ಮನ್ನು ಕುಗ್ಗಿಸುತ್ತದೆ. ರೀತಿಯ ಚಟ ನಮ್ಮನ್ನು ಕುಟುಂಬ ಮತ್ತು ಸ್ನೇಹಿತರಿಂದ ದೂರ ಇಡುತ್ತದೆ. ದೀರ್ಘಕಾಲ ಮಾದಕ ವಸ್ತುಗಳ ಸೇವನೆ ಅಥವಾ ವಸ್ತುಗಳನ್ನು ಸೇವಿಸಲಾಗದ ಚಡಪಡಿಕೆಯಿಂದ ನಡವಳಿಕೆಯಲ್ಲಿ ತೊಂದರೆ ಮತ್ತು ಖಿನ್ನತೆ ಉಂಟಾಗಬಹುದು.

ಎಲ್ಲಾ ವಯಸ್ಸಿನವರಲ್ಲಿಯೂ ವಿವಿಧ ಕಾರಣಗಳಿಂದ ಖಿನ್ನತೆ ಕಾಣಿಸಿಕೊಳ್ಳಬಹುದು. ಮಕ್ಕಳು, ಮಹಿಳೆಯರು ಮತ್ತು ಹಿರಿಯರಲ್ಲಿ ಕಾಣಿಸಿಕೊಳ್ಳು.

    ಕೇಳುಗರೇ ಖಿನ್ನತೆ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಲು ಕೇಳಿ ರೇಡಿಯೋ ಆಕ್ಟಿವ್ ಛಿಡಿ 90.4 ಟದ  ಆಗಿ ಆಕ್ಟಿವ್.

    ಪ್ರತಿ ಗುರುವಾರ ಬೆಳ್ಳಗೆ 10.30 ರಿಂದ 11.00 ಕ್ಕೆ  ಮನೋಚರ್ಚ ಕಾರ್ಯಕ್ರಮದಲ್ಲಿ ಮಾನಸಿಕ ಕಾಯಿಲೆಗಳ ವಿಷಯದ ಬಗ್ಗೆ ಕೇಳಿ  ತಪ್ಪದೇ ಕೇಳಿ. 

 

 • ಪದ್ಮಪ್ರಿಯಾ (ರೇಡಿಯೊ ಜಾಕಿ)

 

 

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s