ಸಾಮಾನ್ಯವಾಗಿ ಕಲಿಕೆಯ ಸಂಪ್ರದಾಯವು ಕೇವಲ ಪಠ್ಯಕ್ರಮಗಳೊಳಗೆ ಮಾತ್ರವಾಗಿದೆ. ಇಂದು ಮಕ್ಕಳ ಕಲಿಕೆಯ ಅಭ್ಯಾಸ ಪುಸ್ತಕದ ಪುಠಗಳಲ್ಲಿ, ಇಲ್ಲಾವಾದರೆ ಇಂಟರ್ನೆಟ್ನ ಬ್ರೌಸಿಂಗ್ನಲ್ಲಿ. ಹಾಗೆಯೆ ಈ ಮಾಂತ್ರಿಕ ಜಗತ್ತು ಮಕ್ಕಳ ಭೌತಿಕ ಮತ್ತು ಮಾನಸಿಕ ಜೀವನವನ್ನು ಕಲುಷಿತಗೊಳಿಸಿದೆಯೆಂದರೆ ತಪ್ಪಾಗಲಾರದು. ಮಕ್ಕಳು ಮಾತೃ ಭಾಷೆಗಿಂತಲೂ ಆಂಗ್ಲ ಭಾಷೆಯ ನಾಲಿಗೆಯ ಉರುಳುವಿಕೆಗೆ ಬಹಳ ಒತ್ತನ್ನು ನೀಡುವರು. ಇಂದಿನ ಶಿಕ್ಷಣ ಜಗತ್ತು ಮಕ್ಕಳಿಗೆ ತನ್ನ ಊರಿನ ಸಂಸ್ಕೃತಿ, ಇತಿಹಾಸ, ಭಾಷೆ, ಕಥೆಗಳಿಗಿಂತಲೂ ಹೊರಗಿನದ್ದನ್ನು ರುಚಿಸುವುದರಲ್ಲಿ ತೊಡಗಿರುತ್ತದೆ.
ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡುವ ಕನಸನ್ನು ಎಲ್ಲ ಪೋಷಕರು ಕಾಣುತ್ತಾರೆ. ನಮ್ಮ ಮಕ್ಕಳನ್ನು ಯಾವ ಶಾಲೆಗೆ ಸೇರಿಸಬೇಕೆಂಬ ಚಿಂತೆ ಮದುವೆಗಿಂತಲೂ ಮುಂಚಿತವಾಗಿಯೆ ಯೋಚಿಸುವ ಕಾಲ ತಲುಪಿದ್ದೇವೆ. ಮಧ್ಯಮವರ್ಗದ ಜನರೂ ಹಾಗು ಬಡಜನರು ಇಂದು ಮನೆಗೆ ಹತ್ತಿರವಾಗುವಂತದ್ದು, ತಮ್ಮ ವರಮಾನದ ಅನುಕೂಲಕ್ಕೆ ಸರಿ ಹೊಂದುವಂತೆ ಒಳ್ಳೆಯ ಶಿಕ್ಷಣವನ್ನು ನೀಡುವ ಹುಡುಕಾಟದಲ್ಲಿರುತ್ತಾರೆ. ಈ ಜಂಜಾಟದಲ್ಲಿ ಆ ಶಿಕ್ಷಣ ಕೇವಲ ಪಠ್ಯಅಭ್ಯಾಸವಲ್ಲದೆ ಜೀವನದ ಕೌಶಲ್ಯಗಳ ಅಭಿವೃದಿಯುಕುಡ ಆಗಬೇಕು ಎಂಬುದನ್ನ ಮರೆತುಬಿಡುತ್ತಿವಿ. ಇಂತಹ ಯೋಚನೆಗಳಿಗೆ ರಾಜರಾಜೇಶ್ವರಿ ನಗರದ ಒಂದು ಯುವ ಸೈನ್ಯವು “ಎಡ್ಯೂಲ್ಯಾನ್ಸ್” (Edulanes) ಎಂಬ ಸೌಲಭ್ಯವನ್ನ ಪ್ರಾರಂಭಿಸಿದೆ.
ನಮ್ಮ ಬಾನುಲಿ ಕೇಂದ್ರಕ್ಕೆ ಬಂದ ಈ ಯುವ ತಂಡ ಶಿಕ್ಷಣದ ಕುರಿತು ಸಾಕಷ್ಟು ವಿಚಾರಗಳನ್ನು, ಅವರ ನೇತ್ರತ್ವಗಳನ್ನೂ, ಶಾಲೆಗಳೊಂದಿಗೆ ಅವರ ತೊಡುಗುವಿಕೆ ಮತ್ತು ಅವರ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ Edulanes ತಂಡದಿಂದ ಮನೋಜ್ ಹಾಗೂ ಐಶ್ವರ್ಯ ಕೀರ್ತನರವರು ಶಾಲೆಗಳಲ್ಲಿ ಮಕ್ಕಳೊಂದಿಗೆ ಮಣ್ಣಿನ ಬೀಜಕೋಶಗಳ ತಯಾರಿಕೆಗಳ ಅನುಭವದಿಂದ ಕನ್ನಡ ಭಾಷೆಯ ಶ್ರೀಮಂತಿಕೆಯ ಕುರಿತಾದ ಕಾಳಜಿಯ ಮಾತುಗಳವರೆಗೆ ನಿಮ್ಮನ್ನ ಕ್ರಿಯಾಶೀಲಿಸುತದೆ.
ಯುವ ಶಕ್ತಿಯು ಇಂದು ಸಮಾಜದ ಹಲವು ಬದಲಾವಣೆಗಳೆಡೆಗೆ ಕಾಲಿಡುತ್ತಿದೆ. ಅಂತಹ ಶಕ್ತಿಯಲ್ಲಿ ಎಡ್ಯೂಲ್ಯಾನ್ಸ್ ತಂಡವು ತಮ್ಮ ಶಕ್ಯತೆಯೊಂದಿಗೆ ಶಿಕ್ಷಣ ಚೌಕಟ್ಟಿನಲ್ಲಿ ಸಾಕಷ್ಟು ಬದಲಾವಣೆ ಹಾಗು ಅಭಿವೃದಿಯೆಡೆಗೆ ನಡೆಯುತ್ತಿದೆ. ಕೆಳಗಿರುವ ಲಿಂಕನ್ನು ಕ್ಲಿಕ್ ಮಾಡಿ… ಈ ಯುವ ಶಕ್ತಿಯ ದ್ವನಿಗೆ ಕೈಜೋಡಿಸಿ!
-ಶಿಲೋಕ್ ಮುಕ್ಕಾಟಿ
https://www.facebook.com/edulanes/?ref=page_internal