ನಮ್ಮ ರೇಡಿಯೋ ಆಕ್ಟಿವಿನ ಡಾರ್ಲಿಂಗ್ ವಿಮೆನ್ ಬ್ಯುಲಾರವರ ಅಡುಗೆ ಮನೆಗೆ ಪಾಕಶಾಲಾ ರಾಣಿಯಾದ ವಿಜಯ ಕಾಲಿಟ್ಟಾಗ ಆದದ್ದು ತುಂಬಾ ಸ್ಪೈಸಿ ಸ್ಪೈಸಿ. ಮಾತಿನ ಚಕಮಕಿಗಳೊಂದಿಗೆ ರುಚಿಕರವಾದ ತರಕಾರಿ ಪಲಾವ್ ಹಾಗು ನಾಲಿಗೆ ಚಪ್ಪರಿಸುವ ಚಿಕನ್ ಗ್ರೇವಿ. ಆಂಧ್ರ ಸ್ಟೈಲ್ ಅಡುಗೆಗಳೆ ಹಾಗೆ, ಮಸಾಲೆಗಳ ಆಚರಣೆಗಳೊಂದಿಗೆ ಚಪ್ಪರಿಸುವ ನಾಲಿಗೆಗಳಿಗೆ ಹಬ್ಬ ಮಾಡಿಸುವುದು.
ಈ ಎಪಿಸೋಡ್ ನಲ್ಲಿ ನಿಮಗೆ ವಿಜಯ ಹಾಗು ಬ್ಯುಲಾ ಸಿಕ್ಕಾಪಟ್ಟೆ ಖಾರ ಹಾಗು ರುಚಿಕರ ತರಕಾರಿ ಪಲಾವ್ ಮಾಡುವುದನ್ನ ವಿವರಿಸುತ್ತಾರೆ. ಹಾಗೆ ಬ್ಯುಲಾ ತಮ್ಮ ಜೀವನದ ಶೈಲಿ ಹಾಗು ಅಡುಗೆಯೊಂದಿಗೆ ಮನೆಯ ಸಂಬಂಧಗಳೊಡನೆ ಬೆಳೆಸುವ ಬಾಂಧವ್ಯದ ವೈಚಾರಿಕತೆಯನ್ನು ಹಂಚಿಕೊಳ್ಳುವರು. ಹಾಗೆ ಅದರೊಂದಿಗೆ ತುಂಬ ಟೇಸ್ಟಿಯಾದ ಚಿಕನ್ ಗ್ರೇವಿಯನ್ನು ಮಾಡುವರು.
ಬನ್ನಿ, ಕೆಳಗಿರುವ ಲಿಂಕನ್ನು ಕ್ಲಿಕ್ ಮಾಡಿ… ನಮ್ಮ ಅಡುಗೆ ರಾಣಿ ವಿಜಯ ಅವರೊಂದಿಗೆ ಅಡುಗೆ ಮನೆಗಳ ಕಥೆಗಳನ್ನು ಕೇಳುತ್ತ ಹೊಸದೊಂದು ರುಚಿಯನ್ನ ತಯಾರಿಸೋಣ.
– ಶಿಲೋಕ್ ಮುಕ್ಕಾಟಿ