CRT(ಮಕ್ಕಳ ಹಕ್ಕುಗಳ ಸಮಿತಿ), ಆಗಸ್ಟ್ 29, 2002 ರಂದು ಪ್ರಾರಂಭವಾದ NGO ನ್ಯಾಯ ಆಧಾರಿತ ಸೇವೆಗಳನ್ನು ಹದಿನೈದು ವರುಷಗಳಿಂದ ಒದಗಿಸುತ್ತಲಿದೆ. ದಕ್ಷಿಣ ಭಾರತದ ಮೇಲೆ ವಿಶೇಷ ಗಮನವನ್ನು ಹೊಂದಿರುವ ಇವರ ಚಟುವಟಿಕೆಗಳು ಭಾರತದಾದ್ಯಂತ ಹರಡಿದೆ.
ಇವರು “ಪ್ರತಿ ಮಗುವಿಗೆ ಪ್ರತಿ ಹಕ್ಕು” ಎಂಬ ನಂಬಿಕೆಯಿಂದ ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಕ್ಷೇತ್ರ ಚಟುವಟಿಕೆಗಳು ಕರ್ನಾಟಕದಲ್ಲಿ ಮಾತ್ರ ಲಭ್ಯವಿದ್ದರೂ, ತರಬೇತಿ ಮತ್ತು ಬೆಂಬಲವು ರಾಷ್ಟ್ರೀಯವಾಗಿ ಲಭ್ಯವಿದೆ. ಅವರ ನಿಯೋಗವೂ ಯಾವುದಾದರೂ ಮತ್ತು ಎಲ್ಲಿಯಾದರೂ ಇರುವ ಮಕ್ಕಳ ಅಂತರ್ಗತ ಮತ್ತು ಅವಿಭಕ್ತ ಹಕ್ಕುಗಳನ್ನು ರಕ್ಷಿಸಲು ಮತ್ತು ಉತ್ತೇಜಿಸಲು ಪ್ರಯತ್ನಿಸುವಂತದ್ದು.
ರೇಡಿಯೋ ಆಕ್ಟಿವ್ ಹಾಗೂ CRT ನಂಟು ಒಂಬತ್ತು ವರ್ಷದ್ದು. ಸಾವಿರಕ್ಕೂ ಹೆಚ್ಚು ರೇಡಿಯೋ ಕಾರ್ಯಕ್ರಮಗಳು ಹಾಗು ನೂರಕ್ಕೂ ಹೆಚ್ಚು ಮಕ್ಕಳ ಕಾರ್ಯಕ್ರಮಗಳನ್ನು ಒಟ್ಟಾಗಿ ಮಾಡಲಾಗಿದೆ. ವಾಸುದೇವ ಶರ್ಮ, ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ನಾಗಸಿಂಹ ಜಿ ರಾವ್, ಸಹ ನಿರ್ದೇಶಕರು ಹಾಗೂ CRTಯ ಎಲ್ಲಾ ಸಿಬ್ಬಂದಿಗಳು ತಮ್ಮ ವರುಷಗಳ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಅವರ ಸಿಹಿ ನೆನಪುಗಳು ಮತ್ತು ಸಿರಿ ಅನುಭವಗಳ ಮಾಲಿಕೆಗಳನ್ನು ನಿಮ್ಮೊಂದಿಗೆ ನಾವು ಅರ್ಪಿಸುತ್ತಿದ್ದೇವೆ.
RJ ವಿಜಯರವರು ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಕೆಳಗಿರುವ ಲಿಂಕನ್ನು ಕ್ಲಿಕ್ ಮಾಡಿ, ಕೇಳಿ “ಬಾಲ್ಯ ಅಮೂಲ್ಯ” – CRTಯಾ ಹದಿನೈದು ವರುಷಗಳ ಅನುಭವದ ಮಾತುಗಳನ್ನು. ಕೇಳಿ ರೇಡಿಯೋ ಆಕ್ಟಿವ್, ಬದುಕಿನಲ್ಲಿ ಆಕ್ಟಿವ್ ಆಗಿರಿ.
-ಶಿಲೋಕ್ ಮುಕ್ಕಾಟಿ