ಆತ್ಮಹತ್ಯೆ
ಡಾ// ಸ್ನೇಹ ರವರು ಇಂದಿನ “ಮನೋಚರ್ಚ ಕಾರ್ಯಕ್ರಮದಲ್ಲಿ ” ಆತ್ಮಹತ್ಯೆ ಬಗ್ಗೆ ಮಾತಾನಾಡಿದ್ದಾರೆ.
ಆತ್ಮಹತ್ಯೆ ಎಂದರೇನು ?
ತನಗೆ ತಾನೆ ಸಾವು ತಂದುಕೊಳ್ಳುವುದು ತನ್ನ ಜೀವನವನ್ನು ಕೊನೆಗೊಳಿಸುವ ಉದ್ದೇಶದಿಂದ ಮಾಡುವ ಕ್ರಿಯೆಯನ್ನು ಆತ್ಮಹತ್ಯೆ ಎನ್ನುತ್ತಾರೆ.
ಆತ್ಮಹತ್ಯೆ ಪ್ರಮಾಣ ಎಷ್ಟಿದೆ ಎಂದರೆ ಪ್ರತಿ ವರ್ಷ ಬೆಂಗಳೂರಿನಲ್ಲಿ 4 ಸಾವಿರದಷ್ಟು ಜನರು ಆತ್ಮಹತ್ಯೆಯಿಂದ ಸಾವು ಹೊಂದುತ್ತಿದ್ದಾರೆ.
ಆತ್ಮಹತ್ಯೆ ಯುವಪೀಳಿಗೆಯಲ್ಲಿ ಇದು 3ನೇ ಸಾವಿನ ಕಾರಣವಾಗಿದೆ
ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿಪ್ರಕಾರ ಪ್ರತಿ ವರ್ಷ 8 ಲಕ್ಷ ಜನ ಆತ್ಮಹತ್ಯೆಯಿಂದ ಮರಣಹೊಂದುತ್ತಿದ್ದಾರೆ . ಪ್ರತಿ 40 ಸೆಕೆಂಡಿಗೆ ಒಂದು ಆತ್ಮಹತ್ಯೆ
ಆತ್ಮಹತ್ಯೆಯ ಬಗ್ಗೆ ಕುರುಹುಗಳು –
*ಮಾತಿನಲ್ಲಿ 17.0%
*ಬರಹದಲ್ಲಿ 4.0%
*ಪರೋಕ್ಷವಾಗಿ 62.0%
*ಕುಟುಂಬದವರ ಶಂಕೆ 17.0%
ಆತ್ಮಹತ್ಯೆ – ಎಚ್ಚರಿಕೆಯ ಲಕ್ಷಣಗಳು
*ಇತ್ತೀಚಿನ ನಷ್ಟ
*ಕುಟುಂಬದಲ್ಲಿ ನಿರಾಸಕ್ತಿ
*ನಡವಳಿಕೆಯಲ್ಲಿ ಬದಲಾವಣೆ
*ಮಾನಸಿಕ ಕಾಯಿಲೆ
*ನಿರಾಸಕ್ತಿ
*ಮದ್ಯಪಾನ/ದುಶ್ಚಟಗಳು
*ಕುಟುಂಬದಲ್ಲಿ ಆತ್ಮಹತ್ಯೆ ಇತಿಹಾಸ
*ಹಸಿವು/ನಿದ್ರೆಯ ತೊಂದರೆ
*ಸಾವಿನ ಬಗ್ಗೆ ಮಾತನಾಡುವುದು
*ನಿರಾಸೆ
* ಸ್ವಂತ ಮಹತ್ವದ ಸ್ವತ್ತುಗಳ ಧಾನ
ಆತ್ಮಹತ್ಯೆಯನ್ನು ತಡೆಗಟ್ಟಬಹುದೇ –
*ಪ್ರಾರಂಭಿಕ ಹಂತದಲ್ಲಿ ಗುರುತಿಸುವುದು
*ಒಂಟಿಯಾಗಿ ಬಿಡಬಾರದು
*ಜೊತೆಗಿದ್ದು ಬೆಂಬಲಿಸುವುದು
*ಹೆಚ್ಚು ನಿರೀಕ್ಷೆ ಇಲ್ಲದೇ ಒಪ್ಪಿಕೊಳ್ಳುವುದು
*ಸೂಕ್ತವಾದ ವೈದ್ಯಕೀಯ ಗಮನ
*ತುತರ್ು ಚಿಕಿತ್ಸೆ
*ಮದ್ಯವ್ಯಸನ ಸಮಸ್ಯೆಗಳಿಗೆ ಸೂಕ್ತ ಪರಿಹಾರ
*ವ್ಯಕ್ತಿಗಳೊಂದಿಗೆ ಬೆರೆಯುವುದು
*ಸಾಮಾಜಿಕ ಬೆಂಬಲ ಸಿಗುವಂತೆ ಮಾಡುವುದ
ಸಂದೇಶಗಳು –
ನಿಮ್ಮ ಸ್ನೇಹಿತ/ಹತ್ತಿರದ ಸಂಬಂಧಿಯೊಡನೆ ಮಾತನಾಡಿ, ದೇವರನ್ನು ಪ್ರಾಥರ್ಿಸಿ, ಎಲ್ಲವು ಒಳ್ಳೆಯದಾಗುತ್ತದೆ ಎಂಬ ಭರವಸೆ ಇರಲಿ. ಒಂಟಿಯಾಗಿರಬೇಡಿ, ಆಲಸಿಗಳಾಗಬೇಡಿ, ಸದಾ ಚಟುವಟಿಕೆಯಿಂದಿರಿ.
ನೆನಪಿರಲಿ ನೀವು ಸಾವನ್ನಪ್ಪಿದರೆ ನಿಮ್ಮ ಮಡದಿ ಮತ್ತು ಮಕ್ಕಳು ಅನಾಥರಾಗುತ್ತಾರೆ. ನಷ್ಟ ಪರಿಹಾರ ನಿಮ್ಮ ನಿಧನಕ್ಕೆ ಪರಿಹಾರ ನೀಡುವುದಿಲ್ಲ. ಸಾವು ಸಮಸ್ಯೆಗೆ ಉತ್ತರವಲ್ಲ.
ನೆನಪಿರಲಿ
ವೈದ್ಯರನ್ನು ಸಂಪಕರ್ಿಸಿ , ಒಂಟಿಯಾಗಿ ಬಿಡಬೇಡಿ ಸಮಸ್ಯೆಯು ಜೀವನದಲ್ಲಿ ಒಂದು ಭಾಗ ಆತ್ಮಹತ್ಯೆ ಯೋಚನೆ ಬಂದವರಲ್ಲಿ ಬಹುಪಾಲು ಬದುಕಲು ಆಯ್ದುಕೊಂಡಿದ್ದಾರೆ
ಸಹಾಯವಾಣಿಗಳು
ಆರೋಗ್ಯವಾಣಿ – 104
ಆತ್ಮಹತ್ಯೆ ತಡೆಗಟ್ಟುವಿಕೆ ಸಹಾಯ್ 080- 25497777
ಈ ಕಾರ್ಯಕ್ರಮದ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಲು link click ಮಾಡಿ
ಕೇಳುಗರೇ ಮಾನಸಿಕ ಖಾಯಿಲೆಗಳ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಲು ಕೇಳಿ RadioActive CR90.4MHz ಆಗಿ ಆಕ್ಟಿವ್.
ಪ್ರತಿ ಗುರುವಾರ ಬೆಳ್ಳಗೆ 10.30 ರಿಂದ 11.00 ಕ್ಕೆ ಮನೋಚರ್ಚ ಕಾರ್ಯಕ್ರಮದಲ್ಲಿ
ಪದ್ಮಪ್ರಿಯಾ (Radio Jockey (RadioActive CR90.4MHz)