ಪ್ರೀತಿಯ ರೋಮಾಂಚನದ ಸ್ಪರ್ಶ ಚೆಂದ. ಅದರ ಸಂಭ್ರಮವು ಮನಸ್ಸನ್ನು ಜಿಗಿಸಿ ಹಾರಾಡಿಸುವುದು. ಆದರೆ ಅದೇ ಪ್ರೀತಿ ನಾಲಗೆಯ ಮೇಲೆ ಬಿದ್ದ ಬಿಸಿ ತುಪ್ಪದಂತಾದರೆ ಅದರ ಪ್ರಾಣ ಮರಣಕ್ಕೆ ಸಜ್ಜಿಸುವುದು. ಅದರಲ್ಲೂ ಹೆಣ್ಣು ಆ ಪ್ರೀತಿಯನ್ನ ರಕ್ಷಿಸುವ ಹೊಣೆಗಾರಿಕೆಯನ್ನ ಹಿಡಿದಿದ್ದಲ್ಲಿ ಅವಳು ಪ್ರೀತಿಯ ಉಷ್ಣತೆಗೆ ಮೇಣದಂತೆ ಕರಗುವಳು. ಅವಳ ಭಾವನೆ, ಅವಳ ಮುಗುಳ್ನಗು , ಅವಳ ಹಿಡಿತ ಸಹನೆ ಎಲ್ಲವು ನಿಶಕ್ತಿಯಾಗುವುದು.
ನನ್ನ ಗೆಳತಿ ಅನನ್ಯ ಅಂತಹ ಕಥೆಗಳಲ್ಲಿ ಒಬ್ಬಳು. ಭರವಸೆಗಳ ಮರಣದ ಕೆಸರಲ್ಲಿ ಬೆಳೆದು ಅರಳಿರುವ ಅನನ್ಯತೆ ಅವಳು. ಸ್ತ್ರೀತ್ವ, ಸಮಲೈಂಗಿಕತೆಯ ನಿರೂಪಣೆಗಳನ್ನ ಬದಲಾಯಿಸಿದ ಬದುಕು ಅವಳದ್ದಾಗಿದೆ. ಅವಳ ಆಲೋಚನೆಗಳು ತೆಪ್ಪದ ಮೇಲೆ ನದಿಯ ನಡುಭಾಗದಲ್ಲಿ ನಿಂತಂತೆ. ಕಪ್ಪು ಬಿಳುಪುಗಳ ಬಣ್ಣಗಳೊಡನೆ ಕಣ್ಣಾಮುಚ್ಚಾಲೆ ಆಡುವ ಆಟ ಅವಳದು.
ಅವಳ ಬದುಕಿನ ನಾನಾ ಬಣ್ಣಗಳು ಹಲವು ಕಥೆಗಳನ್ನು ಬಿಚ್ಚಿಡುತ್ತವೆ. ಬದುಕಿನ ಬವಣೆ ಹೊತ್ತ ಅವಳ ನಲುಮೆ ಕೆಮೆರಾ ಹಿಡಿದು ಹಲವು ಕಥೆಗಳನ್ನು ಹೇಳುವ ಕನಸ್ಸು ಅವಳದು. ತಳಮಳಗಳ ಸುಳಿಯಲ್ಲಿ ಭರವಸೆಯ ಈಜುವಿಕೆಯೊಳಗೆ ಅವಳದು ಒಂದು ಹೋರಾಟ. ಕೇಳಿ ಅನನ್ಯಳ Colourful ಮನಸ್ಸಿನ Colourful ಮಾತುಗಳು.
– ಶಿಲೋಕ್ ಮುಕ್ಕಾಟಿ