ಪುರುಷ ಪ್ರಧಾನ ಸಮಾಜದಲ್ಲಿ ಇಂದು ಎಷ್ಟೋ ಧ್ವನಿಗಳು ಸಮಾನತೆಗೆ ದಣಿಸುತಿದೆ. ಲಿಂಗಗಳಿಗೆ ಅನುಸರಿಸಿದಂತೆ ಕಾಲ ಕಾಲದಿಂದಲೂ ಅನುಸರಿಸುವ ಚೌಕಟ್ಟುಗಳು, ರೀತಿ ರಿವಾಜುಗಳು ಅದರ ಕುರುಡು ನಂಬಿಕೆಗಳ ಆಚರಣೆ ಇವತ್ತಿಗೂ ನಮ್ಮ ಬೆನ್ನುಬಿಟ್ಟಿಲ್ಲ. ಹಿಂದೆ, ನಮ್ಮ ಜಗತ್ತಿನ ಸಾಹಿತ್ಯವನ್ನೆಲ್ಲಾ ಪುರುಷನು ಆಳಿರುವುದರಿಂದ ಆ ಅಕ್ಷರಗಳೇ ನಮಗೆಲ್ಲರಿಗೂ ಧರ್ಮ ಸಿದ್ಧಾಂತವಾಗಿದೆ ಎಂದರೆ ತಪ್ಪಾಗಲಾರದು. ಇಂದು ಆ ಸಿದ್ಧಾಂತವನ್ನೆಲ್ಲ ಆಚರಿಸಿ ಮನುಷ್ಯತ್ವವನ್ನೇ ನಾವು ಮರೆತಿದ್ದೇವೆ ಎಂಬ ಸತ್ಯ ವಿಷಾದನೀಯ.
ಇಂತಹ ಸ೦ಧರ್ಭದಲ್ಲಿ ಎಷ್ಟೋ ಸ್ತ್ರಿವಾದಿಗಳು ಸಮಾನತೆಗೆ ಶ್ರಮಿಸುತ್ತಿದ್ದಾರೆ. ಆ ಪ್ರಯತ್ನಗಳು ನಮಗೆ ಸಾಮಾನ್ಯವಾಗಿ ಕಾಣಬಹುದು, ಆದರೆ ಆ ಪ್ರಯತ್ನವನ್ನು ಮಾಡುವ ಪ್ರತಿಯೊಂದು ವ್ಯಕ್ತಿಯ ಹಿಂದೆ ಹಲವು ಕಥೆಗಳು ಅಣಗಿದೆ. ಆ ಸಾಮಾನ್ಯ ಪ್ರಯತ್ನಗಳೇ ಮೌನ ಹೊದ್ದ ಜನರಿಗೆ ಸಂವಾದದ ಅವಕಾಶಗಳನ್ನು ಒದಗಿಸಿದೆ. ಇವತ್ತು ನಾವು ನಮ್ಮ Active Women ಕಾರ್ಯಕ್ರಮದಲ್ಲಿ ಅಂತಹದೇ ಬದಲಾವಣೆಗೆ ಸೆಣೆಯುತ್ತಿರುವ, ನಮ್ಮೊಳಗೆ ಕೂತಿರುವ ಮೌನಗಳಿಗೆ ಪ್ರೇರಿಪಿಸುವ ಶಕ್ತಿಯನ್ನ ನಾವು ನಿಮ್ಮ ಮುಂದೆ ಅರ್ಪಿಸುತ್ತಿದ್ದೇವೆ.
“ಅನಲ” ಅನ್ನುವ ಕಿರು ಚಿತ್ರದಿಂದ ಕೇವಲ ನಗರಗಳಲ್ಲಿಯೇ ಅಲ್ಲದೆ ನಮ್ಮ ಕರ್ನಾಟಕದ ಹಲವು ಹಳ್ಳಿಗಳಲ್ಲೂ, ಅದರಲ್ಲೂ ಯುವ ಮನಸಿನಲ್ಲಿ ಪ್ರಭಾವ ಬೀರಿಸಿರುವ ಈ ಚಿತ್ರದ ನಿರ್ದೇಶಕಿಯೇ ನಮ್ಮ ಇಂದಿನ ಕಾರ್ಯಕ್ರಮದ ನಾಯಕಿ. ಅವರೇ ಸಂಜ್ಯೋತಿ ವಿ.ಕೆ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಇವರು ಬೆಂಗಳೂರಿನ ಯಾಂತ್ರಿಕ ಬದುಕಿಗೆ ತುತ್ತಾಗದೆ ನಮ್ಮ ಸುತ್ತಮುತ್ತಲಿನಲ್ಲಿ ಆಗಬೇಕಾಗಿರುವ ಬದಲಾವಣೆಗೆ ಸೃಜನಾತ್ಮಕವಾಗಿ ದುಡಿಯುತ್ತಿದ್ದಾರೆ. ಸಿನಿಮಾ ಎನ್ನುವ ಮಾಧ್ಯಮವನ್ನು ಅಭಿವ್ಯಕ್ತಿಯ ಮಾರ್ಗವಾಗಿ ಹಿಡಿದಿರುವ ಇವರು ಅನಲ ಎಂಬ ಚಿತ್ರದಂತೆ ಹಲವು ಚಿತ್ರಗಳನ್ನು ಸಮಾಜಕ್ಕೆ ಕೊಡುವ ಕನಸಿನಲ್ಲಿ ನಡೆಯುತಿದ್ದಾರೆ.
ಸಂಜ್ಯೋತಿಯವರು ಈ ಹಾದಿಯಲ್ಲಿಗೆ ಕರೆತಂದದ್ದು ಅವರ ಹಿಂದಿರುವ ಹಲವು ಕಥೆಗಳು, ಹಸಿಯಾಗಿರುವ ಅನುಭವಗಳು, ಸಿಹಿಯಾಗಿರುವ ನೆನಪುಗಳು. ನನ್ನೊಂದಿಗೆ ಅವರು ಹಂಚಿಕೊಂಡ ಅವರ ಅಭಿಪ್ರಾಯ, ಚಿಂತನೆ ಮತ್ತು ವಿಚಾರಗಳು ಎಷ್ಟೋ ಸುತ್ತಲಿನ ವಿಷಯಗಳನ್ನು ಪ್ರಶ್ನಿಸಲು ಪ್ರೇರೇಪಿಸಿತು. ಓದುಗರೇ, ಈ ಕಾರ್ಯಕ್ರಮವನ್ನು ಕೇಳಿದನಂತರ ನಿಮಗೂ ಆ ಅನುಭವವಾದೀತು ಇಂಬ ನಂಬಿಕೆ ನನ್ನದಾಗಿದೆ. ನಮ್ಮೊಂದಿಗೆ ಇರುವ ಇಂತಹ ನಾಯಕಿಯರನ್ನು, ಧ್ವನಿಯನ್ನು ನಾವಿಂದು ಪ್ರೋತ್ಸಾಹಿಸಿ, ಗುರುತಿಸ ಬೇಕು. ಯಾಕೆಂದರೆ ಇನ್ನು ಸಮಾನತೆಯನ್ನು ಆಚರಿಸುವ ದಿನಗಳು.
Active Women ಸಂಜ್ಯೋತಿಯವರ Active ಮಾತುಗಳನ್ನು ಕೇಳಲು ಕೆಳಗಿರುವ ಲಿಂಕನ್ನು ಕ್ಲಿಕ್ ಮಾಡಿ, ಬದುಕಿನಲ್ಲಿ Active ಆಗಿರಿ.