‘Lunch-Box Tales’ is a special series dedicated to the eating habits of Bengaluru’s hard-working autorickshaw drivers. As the host, RJ Shiv Kumar promises to bring together tales of favourite foods, local eateries and their specials, fond lunch boxes, and food dishes relished only on special occasions. Mouth-watering listening guaranteed!
ರುಚು ಅಭಿರುಚಿ ಲಂಚ್ ಬಾಕ್ಸ್ ಕಾರ್ಯಕ್ರಮದಲ್ಲಿ ಆಟೋ ಚಾಲಕ ಮುಕುಂದರವರು ಆರ್.ಜೆ, ಶಿವಕುಮಾರ್ ಒಡನೆ ರುಚಿ-ರುಚಿಯಾದ ಮಾತುಗಳು ಹಂಚಿಕೊಂಡಿದ್ದಾರೆ.
ಮುಖುಂದರವರು ಸುಮಾರು 10 ವರ್ಷಗಳಿಂದ ಆಟೋಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಈ ಮೊದಲು ಇವರು ಮಾಕರ್ೆಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅನಿವಾರ್ಯಗಳಿಂದಾಗಿ ಆಟೋ ಓಡಿಸುವ ವೃತ್ತಿಗೆ ಬರಬೇಕಾಯಿತು. ಇವರು ಬೆಳಿಗ್ಗ ತಿಂಡಿಯನ್ನು ಕೆಲವೊಮ್ಮೆ ಮನೆಯಲ್ಲಿ ಅಥವಾ ಹೊರಗೆ ತಿನ್ನುವ ಅನಿವಾರ್ಯ ಬರುತ್ತದೆ. ಶೇ 90 ರಷ್ಟು ಮನೆಯಲ್ಲಿಯೇ ತಿಂಡಿಯನ್ನು ತಿನ್ನುತ್ತಾರೆ.
ಮದ್ಯಾಹ್ನದ ವೇಳೆಯಲ್ಲಿ ಶೇಕಡ 90% ರಷ್ಟು ಶೇಷಾದ್ರಿಪುರಂ ಅಥವಾ ಹೊಸನಗರದಲ್ಲಿ ಊಟ ಮಾಡುತ್ತಾರೆ.ಯಾಕೆಂದರೆ ದೊಡ್ಡ ಹೋಟೆಲ್ಗಳಾದರೆ ಊಟದಮೊತ್ತ 80 ರೂಪಾಯಿಗೆ ಇರುತ್ತದೆ. ಆದರೆ ರಸ್ತೆಬದಿಯಲ್ಲಾದರೆ 30 ರೂಪಾಯಿ ಗೆ ಊಟ ಸಿಗುತ್ತದೆ. ಅದು ಮನೆಯಲ್ಲಿ ತಯಾರಿಸಿದ ಊಟ ಆಗಿರುವುದರಿಂದ ಒಂದು ಕಡೆ ಸ್ನೇಹ, ಒಂದು ಕಡೆ ಪ್ರೀತಿ , ಒಂದುಕಡೆ ರುಚಿ ,ಮಾನವೀಯತೆ, ಹಾಗೂ ಮನೆಯವರತರ ಇರುವುದರಿಂದ ರಸ್ತೆ ಬದಿಯಲ್ಲಿ ಊಟ ಮಾಡುತ್ತಾರೆ.
ಮಾಗಡಿ ರೋಡಿನಲ್ಲಿರುವ ಪೆಟ್ಟಯ್ಯ ಮಿಲಿಟರಿ ಹೋಟೆಲ್ ಬಹಳ ಪ್ರಸಿದ್ದಿಯಾಗಿರುವುದರಿಂದ ಬಹಳಷ್ಟು ಶೇಕಡ,75 % ಆಟೋ ಚಾಲಕರು ಮಾಂಸದ ಆಹಾರ ತಿನ್ನಬೇಕು ಎಂದರೆ ಅಲ್ಲಿಗೆ ಹೋಗುತ್ತಾರೆ. ಮುಖುಂದರವರು ಯಾವಾಗಲು ಊಟಮಾಡುವ ಏರಿಯಾದಲ್ಲಿ ಊಟ ಮಾಡಿ ದುಡ್ಡು ಇಲ್ಲ ಎಂದರೆ ಪರವಾಗಿಲ್ಲ ನಾಳೆಕೊಡಿ ಎಂದು ಹೇಳುತ್ತಾರೆ. ಯಾಕೆಂದರೆ ದುಡ್ಡು ಮುಖ್ಯ ಅಲ್ಲ ಮಾನವೀಯತೆ, ಮನುಶ್ಯತ್ವ ಬಹಳ ಮುಖ್ಯ , ಜನರು ನಾವು ಮಾತನಾಡುವ ರೀತಿ ಮತ್ತು ನಡವಳಿಕೆಯ ಮೇಲೆ ನಮ್ಮನ್ನು ಅವಲಂಬಿಸಿರುತ್ತಾರೆ, ದುಡ್ಡು ಇವತ್ತು ಬರುತ್ತೆ ನಾಳೆ ಹೋಗುತ್ತೆ. ನಂಬಿಕೆ, ವಿಶ್ವಾಸ ಮುಖ್ಯ ಎಂದು ಇವರ ಅಭಿಪ್ರಾಯ.
ಬ್ಯಾಟ್ರಾಯನ ಪುರದಲ್ಲಿ 35 ರೂಪಾಯಿಗೆ ಇಡ್ಲಿ, ಪುಲಿಯೋಗ್ರೆ, ಉಪ್ಪಿಟ್ಟು, ವಡೆ ಕೊಡುತ್ತಾರೆ. ಇದರಿಂದ ಹೊಟ್ಟೆ ತುಂಬುತ್ತೆ. ಊಟ ಮಾಡಿ ಅದಮೇಲೆ ಅರ್ದಗಂಟೆ ಮಲಗುತ್ತೇನೆ. ನಂತರ ಮತ್ತೆ ಕೆಲಸಕ್ಕೆ ಹೊಗುತ್ತೆನೆ ಎಂದರು.