In this episode, Mohan Kumar, a social worker of psychiatry attached to the State Mental Authority and a doctorate student studying alcohol addiction, speaks regarding the mental stability of people who are addicted to alcohol, and the misconceptions that abound about their medical treatment.
ಇವತ್ತಿನ ಮನೋಚಚರ್ೆ ಕಾರ್ಯಕ್ರಮದಲ್ಲಿ ಆರ್.ಜೆ ಪದ್ಮ ಪ್ರಿಯಾ ಮತ್ತು ಡಾ.ಮೋಹನ್ ಕುಮಾರ್, ಇವರು ನಿಮ್ಸಾಸ್ ಆಸ್ಪತ್ರೆಯಲ್ಲಿ ಮನೋಸಾಮಾಜಿಕ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವತ್ತಿನ ಸಂಚಿಕೆಯಲ್ಲಿ ಮಧ್ಯಪಾನದುಚ್ಚಟದ ಪುನರ್ ವಸತಿಯ ಬಗ್ಗೆ ತಿಳಿಸಲು ನಮ್ಮ ಜೊತೆ ಇದ್ದಾರೆ.
ಮಧ್ಯಪಾನದುಚ್ಚಟದ ಪುನರ್ ವಸತಿ:
ಮಧ್ಯಪಾನ, ಅತಿಯಾದ ಮಧ್ಯಪಾನಿಯತೆ, ಅತಿಮೀರಿದಮಧ್ಯಪಾನ, ಅತಿಯಾದಕುಡಿತ, ಇದು ಸಮಾಜಿಕ ಪೀಡುಗು. ನಮ್ಮ ದೇಶದಲ್ಲಿ 3 ದಶಕದ ಹಿಂದೆ 300 ಜನರಿಗೆ ಬಬ್ಬ ಕುಡುಕನನ್ನು ನೋಡುತ್ತಿದ್ದೆವು ಆದರೆ, ಈಗಿನ ಕಾಲದಲ್ಲಿ 10 ಜನರಿಗೆ ಬಬ್ಬ ಕುಡುಕ ಇರುವುದ್ದನು ನೋಡಬಹುದು. ಅದರಲ್ಲೂ ಈಗಿನ ಕಾಲದಲ್ಲಿ ಯುವಕರು, ಗ್ರಾಮೀಣ ಜನರು, ಹೆಂಗಸರು ಮಕ್ಕಳು ಇದು ಗಣನೀಯವಾಗಿ ಇರುವುದ್ದನ್ನು ನೋಡಬಹುದು.
ಮದ್ಯಪಾನ ದುಚ್ಚಟ ಎಂದರೆ: ಮಧ್ಯಪಾನ ದುಚ್ಚಟಎಂಬುದು ನಿಗದಿತ ವಸ್ತು ವಿನ ಮೇಲೆ ವ್ಯಕ್ತಿ ಅವಲಂಬಿತವಾಗಿರುವಂತದ್ದು . ಅವರಿಗೆ ದೈಹಿಕ, ಮಾನಸಿಕ ಆರೋಗ್ಯಕ್ಕೆ ದಕ್ಕೆ ಆಗುವತ್ತದ್ದು ಅದೇರೀತಿ ಸಮಾಜಿಕ, ಆಥರ್ಿಕಚಟುವಟಿಕೆಗಳಿಗೆ ತೊಂದರೆ ಯಾಗುವಂತದ್ದು ಇದನ್ನು ಮಧ್ಯಪಾನದುಚ್ಚಟ ಎಂದು ಹೇಳಬಹುದು .
ಮಧ್ಯಪಾನದುಚ್ಚಟಕ್ಕೆ ಬಿದ್ದಿರುವವರಲ್ಲಿ ಕೆಲವೊಂದು ಲಕ್ಷಣಗನ್ನುಕಾಣಬಹುದು
1. ಬಹಳ ಕಾಲದವರಗೆ ಮದ್ಯಪಾನ ಮಾಡುವಂತದ್ದು: ಬಹಳ ದಿರ್ಘಕಾಲದ ವರೆಗೆ ಮಧ್ಯಪಾನ ಸೇವನೆ ಮಾಡುವುದು ಇದ್ದನು ಮದ್ಯಪಾನದುಚ್ಚಟ ಎನ್ನಬಹುದು . 2. ಮದ್ಯಪಾನದ ಬಗ್ಗೆ ತವಕ : ಮದ್ಯಪಾನವನ್ನು ಸೇವನೆಮಾಡಲು ಹುಡುಕಾಡುವುದು.
3. ಮದ್ಯಪಾನ ಸೇವೆಯಿಂದಾಗುವ ದೈಹಿಕ ಪರಿಣಾಮಗಳು: ಶ್ವಾಸಕೋಶದ ತೊಂದರೆ, ನರದ ತೊಂದರೆ, ಮಿದುಳಿನ ಕಾಯಿಲೆ, ಲಿವರ್ ಕ್ಯಾನ್ಸರ್ , ಇನ್ನೂಮುಂತಾದ ಕಾಯಿಲೆಗಳು ಬರುತ್ತದೆ .
4. ಮಧ್ಯಪಾನ ಸೇವನೆಯ ಮೇಲೆ ಹಿಡಿತವನ್ನು ಕಳೆದುಕೊಳ್ಳುವುದು :ಮಧ್ಯಪಾನವನ್ನು ಈಕಡೆ ಬಿಡಲು ಹಾಗುತ್ತಿಲ್ಲ , ಕುಡಿಯಲು ಹಾಗುತ್ತಿಲ್ಲ , ಮಧ್ಯಪಾನವನ್ನು ಸೇವನೆ ಮಾಡದ್ದಿದ್ದರೆ ನರದ ಸಮಸ್ಯೆ , ಮೈ ನಡುಗುವುದು , ಬೇವರು ಬರುವಂತದ್ದು , ಈ ರೀತಿಯ ಸಮಸ್ಯೆಗಳು ಬರಬಹುದು .
ಮದ್ಯಪಾನದಚ್ಚಟದ ಬಗ್ಗೆ ಇರುವ ತಪ್ಪುಕಲ್ಪನೆಗಳು
ಮಧ್ಯಪಾನ ಮಾಡುವುದು ಒಂದು ಪ್ಯéಾಷನ್, ಮಧ್ಯಪಾನ ಮಾಡುವುದರಿಂದ ತುಂಬ ಉಪಯೋಗವಾಗುತ್ತದೆ ಎಂಬುವುದು ಜನರ ಅಭಿಪ್ರಾಯ. ತುಂಬ ಜನ ಮೈ-ಕೈ ನೋವಿಗೆ ,ತಲೆಬಾರಕ್ಕೆ , ಕೆಮ್ಮ , ನೆಗಡಿ ಮತ್ತು ಸಮಾರಂಭಗಳು ನಡೆಯುವಂತಹ ಸಂದರ್ಭಗಳಲ್ಲಿ , ಲೈಂಗಿಕ ಶಕ್ತಿ ವೃತ್ತಿ ಗೊಸ್ಕರ ಮಧ್ಯಪಾನವನ್ನು ಸೇವನೆ ಮಾಡುತ್ತಾರೆ, ಭಣತಿಆಗಿರುವ ಸಂದರ್ಭದಲ್ಲಿ ಮಧ್ಯಪಾನವನ್ನು ಕೊಡುತ್ತಾರೆ . ಅದು ಮೊದಲುಚಟವಾಗಿ ನಂತರ ದುಚ್ಚಟವಾಗಿ ಪರಿಣಮಿಸುತ್ತಾದೆ .ಇತ್ತಿಚಿಗೆ 2016 ರ ಒಂದು ಅಧ್ಯಯನದ ಪ್ರಕಾರ ನಿಮ್ಸಾಸ್ ಒಂದುರಾಷ್ಷಿಯ ಮಾನಸಿಕ ಸಮೀಕ್ಷೆಯನ್ನು ಮಾಡಿದೆ ಈ ಅಧ್ಯಯನದ ಪ್ರಕಾರ ನಮ್ಮ ಜನಸಂಖ್ಯೆಯಲ್ಲಿ 4.6 ರಷ್ಟು ಜನರು ಮಧ್ಯಪಾನವನ್ನು ಸೇವನೆ ಮಾಡುತ್ತಿದ್ದಾರೆ ಎಂದು ಒಂದು ಸಮೀಕ್ಷೆಯ ಪ್ರಕಾರ ತಿಳಿದು ಬಂದಿದ್ದೆ.
ಮಧ್ಯಪಾನದುಚ್ಚಾಟಕ್ಕೆ ವೈದ್ಯಕೀಯ ವಿಧಾನಗಳು:
1.ವೈದ್ಯಕಿಯ ಚಿಕಿತ್ಸೆ :ಅದರಲ್ಲಿ ರೋಗಿಗಳಿಗೆ ಮಾತ್ರೆಗಳನ್ನು ಕೊಡುತ್ತೇವೆ ಮತ್ತೆ ಅವರಿಗೆ ಹೊರರೋಗಿಚಿಕಿತ್ಸೆ ಮತ್ತು ಒಳರೋಗಿ ಚಿಕಿತ್ಸೆ ಎಂದು ಎರಡು ರೀತಿಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಾದೆ .ಮೊದಲು ಅವರಿಗೆ ರಕ್ತಪರೀಕ್ಷೆಯನ್ನು ಮಾಡಿ ನಂತರ ಚಿಕಿತ್ಸೆಯನ್ನು ಕೊಡಲಾಗುತ್ತಾದೆ .
ಅವರಿಗೆ ಮಾನಸಿಕ ಚಿಕಿತ್ಸೆಯನನ್ನು ಕೊಡಲಾಗುತ್ತಾದೆ. ಅದರಲ್ಲಿ ಕುಂಟುಬದವರ ಪಾತ್ರತುಂಬ ಮುಖ್ಯವಾಗಿರುತ್ತಾದೆ .ಮತ್ತು ಗುಂಪು ಚಿಕಿತ್ಸೆಯನ್ನು ಕೊಡಲಾಗುತ್ತಾದೆ.
ಪರಿಸರ ಚಿಕಿತ್ಸೆ :ರೋಗಿ ವಾಸಿಸುವಂತಹ ಪರಿಸರ ಬಹಳ ಮುಖ್ಯವಾಗುತ್ತಾದೆ. ಅವರಿಗೆ ಮತ್ತೆ ಮಧ್ಯಪಾನದ ನೆನಪಗಾದ್ದತ್ತೆರೋಗಿಯನ್ನು ನೋಡಿಕೊಳ್ಳಬೇಕು.
ವರ್ತನಚಿಕಿತ್ಸೆ :ರೋಗಿಯ ವರ್ತನೆಯನ್ನು ಬದಲಾವಣೆ ಮಾಡುವತ್ತಾದ್ದು, ಅವರ ಉದ್ವೇಗ, ನಾನು ತಪ್ಪು ಮಾಡುತಿದ್ದೀನಿ ಅಂತ ಅವರು ಮನಸ್ಸಿನಲ್ಲಿ ಭಯ ಪಡುವಂತದ್ದು .ಮತ್ತು ಚಂಚಲತೆ ಹೀಗೆ ಮನಸ್ಸಿನಲ್ಲಿ ಆಗುತ್ತಿರುತ್ತಾದೆ. ವೈದ್ಯರು ಅವರಲ್ಲಿ ಆತ್ಮವಿಶ್ವಾಸತುಂಬುತ್ತಾರೆ ಜೊತೆಗೆ ಅವರ ಕುಂಟುಬದವರ ಪಾತ್ರತುಂಬ ಮುಖ್ಯವಾಗಿರುತ್ತದೆ .
ಮಧ್ಯವ್ಯಸನಿಗಳ ಸಂಘ; ಇದು ಅಂತರಾಷ್ಟ್ರಿಯ ಮಟ್ಟದಲ್ಲಿ ಇರುವಂತದ್ದೂ , ಮಧ್ಯಪಾನವನ್ನು ಬಿಟ್ಟಿರುವತಂಹ ವ್ಯಕ್ತಿಗಳೇ ತಾವೇತಮ್ಮ ಸ್ವಂತ ಅನುಭವ , ಸಮಾಥ್ರ್ಯಗಳ ಮೂಲಕ ಅವರೇ ವಾರಕ್ಕೆ 2/3 ಸಭೆಯನ್ನು ನಡೆಸಲಾಗುತ್ತಾದೆ .ಮಧ್ಯಪಾನದುಚ್ಚಟಕ್ಕೆ ಬಿದ್ದಿರುವ ಅದು ಗಂಭೀರ ಆಗಿದ್ರೆ ಔಷಧಿಯಗಳ ಮೂಲಕ ಸರಿಪಡಿಸಲಾಗುತ್ತಾದೆ . ಈ ಸಂಘಟನೆ ಒಂದು ವಿಶಿಷ್ಟ ಎಂದು ಹೇಳಬಹುದು .
ಮೋಹನ್ಕುಮಾರ್ ಅವರ ಸಲಹೆ ಮತ್ತು ಕಿವಿಮಾತು; ಸಮುದಾಯದ ಪಾತ್ರ ತುಂಬ ಮುಖ್ಯ ಅದರಲ್ಲಿ ಪೋಷಕರು , ಶಿಕ್ಷಕರು , ಆರೋಗ್ಯದ ಕಾರ್ಯಕ್ರರ್ತರು , ಪೋಲಿಸರು , ರಾಜಕೀಯ ವ್ಯಕ್ತಿಗಳು , ಇವರೆಲ್ಲಾರ ಸಹಕಾರ ಬೇಕು. ಇದರಿಂದ ನಮ್ಮ ಸಮಾಜದಲ್ಲಿ ಕುಡಿತವನ್ನು ನಿಲ್ಲಿಸಬಹುದು .ಅದರಜೊತೆಗೆ ಪುನರ್ವಸತಿಯ ಚಿಕಿತ್ಸೆಯನ್ನು ನೀಡಬೇಕು.