‘Lunch-Box Tales’ is a special series dedicated to the eating habits of Bengaluru’s hard-working autorickshaw drivers. As the host, RJ Shiv Kumar promises to bring together tales of favourite foods, local eateries and their specials, fond lunch boxes, and food dishes relished only on special occasions. Mouth-watering listening guaranteed!
In this episode we have Auto Driver Devaraju who works 14 hours a day and always eats his breakfast and lunch in the places he likes. He usually sticks to his food menu like ragi ball, green leaves sambar and non veg chicken and mutton weekly twice. He likes small canteens and road side food stalls as they maintain good taste and hygiene which makes them feel home.
ಆರ್ ಜೆ ಶಿವಕುಮಾರ್ರವರ ರುಚಿ-ಅಭಿರುಚಿ ಲಂಚ್ ಬಾಕ್ಸ್ ಕಾರ್ಯಕ್ರಮದ ಈ ಸಂಚಿಕೆಯಲ್ಲಿ ದೇವರಾಜುರವರು ರುಚಿ-ರುಚಿಯಾದ ಮಾತುಗಳನ್ನು ಹಂಚಿಕೊಂಡಿದ್ದಾರೆ. ದೇವರಾಜುರವರು 25 ವರ್ಷಗಳಿಂದ ಬೆಂಗಳೂರಿನಲ್ಲಿ ಆಟೋಚಾಲಕನಾಗಿ ವೃತ್ತಿ ಮಾಡುತ್ತಿದ್ದಾರೆ.
ಅವರು ಬೆಳಗ್ಗೆ 6 ಘಂಟೆಗೆ ಮನೆಯಿಂದ ಹೊರಟರೆ ಸಂಜೆ 8 ಘಂಟೆಗೆ ಮನೆಗೆ ತೆರಳುತ್ತಾರೆ. ಅವರು ಬೆಳಗ್ಗೆ ಮತ್ತು ಮಧ್ಯಾಹ್ನ ಹೊರಗಡೆ ಊಟ-ತಿಂಡಿಯನ್ನು ಮಾಡುತ್ತಾರೆ. ಅವರು ಹೆಚ್ಚಾಗಿ ತಿಂಡಿಯನ್ನು ಚಿಕ್ಕ ಕ್ಯಾಂಟೀನ್ನಲಿ ್ಲ ಅನ್ನ, ಮುದ್ದೆ, ಮೊಸೊಪ್ಪಿನ ಸಾರು, ಉಪ್ಸಾರು, ಇನ್ನು ಮುಂತಾದವನ್ನು ಸೇವಿಸುತ್ತಾರೆ. ಅವರು ಸಾಮಾನ್ಯವಾಗಿ ರಸ್ತೆಯ ಅಂಚಿನಲ್ಲಿ, ತಳ್ಳುವ ಗಾಡಿಯಲ್ಲಿ ಅವರಿಗೆ ರುಚಿ-ಶುಚಿಯಾದ ಆಹಾರ ದೊರೆಯುತ್ತದೆ. ಅದನ್ನೇ ಅವರು ಸವಿಯುತ್ತರೆ.
ತಳ್ಳುವ ಗಾಡಿಯವರಿಗೆ ಗ್ರಾಹಕರ ಅಭಿರುಚಿ ತಿಳಿದಿರುತ್ತದೆ. ಅದರಂತೆಯೇ ಅವರು ಆಹಾರವನ್ನು ತಯಾರಿಸುತ್ತಾರೆ. ಆದ್ದರಿಂದ, ಆಟೋ ಚಾಲಕರು ಅಲ್ಲೇ ಹೋಗಿ ಊಟ ಮಾಡಲು ಬಯಸುತ್ತಾರೆ , ಎಂದು ದೇವರಾಜುರವರು ತಿಳಿಸಿದರು.
ಅವರು ಬೋಟಿ, ಚಿಕ್ಕನ್, ಮಟನ್ ಮತ್ತು ಇತರ ಮಾಂಸಹಾರಿ ತಿನಿಸುಗಳನ್ನು ಮಲ್ಲೇಶ್ವರಂನ ಚಿಕ್ಕ ಕ್ಯಾಂಟೀನ್ನಲ್ಲಿ ಸೇವಿಸುತ್ತಾರೆ. ಅವರು ವಾರದಲ್ಲಿ 2-3 ದಿನಳಷ್ಟೇ ಮಾಂಸ ಸೇವಿಸುತ್ತಾರೆ.
ಹೆಚ್ಚು ಜನರು ಎಲ್ಲಿ ಊಟ ಮಾಡುತ್ತಾರೋ ಅಲ್ಲಿ ಒಂದು ವಿಶೇಷತೆ ಇರುತ್ತದೆ. ಫುಟ್ಪಾತ್ ಸೈಡ್ ಆಗಿದ್ದರೂ ಸ್ವಚ್ಛವಾಗಿರಬೇಕು. ಕುಡಿಯುವ ನೀರಿನ ವ್ಯವಸ್ಥೆ ಉತ್ತಮವಾಗಿರಬೇಕು. ಮನೆಯ ರುಚಿಯಂತೆ ಇರಬೇಕು ಹಾಗೂ ಕಡಿಮೆ ವೆಚ್ಚದ್ದಾಗಿರಬೇಕು, ಎಂದು ಅವರ ಮನದಾಳದ ಮಾತನ್ನು ಹಂಚಿಕೊಂಡರು.