Balya Amulya – Special Episode to mark The Prohibition of Child Marriage Act 2006

44775318_498411130568968_4376529193102475264_n.jpg

 

‘ಬಾಲ್ಯವಿವಾಹಿತರನ್ನು ರಕ್ಷಿಸಿ!’ ಈ ತಲೆಬರಹದಿಂದ ಗಲಿಬಿಲಿಯಾಗಿರಬಹುದು. ಬಾಲ್ಯವಿವಾಹ ನಿಷೇಧಿಸಲಾಗಿದೆ ಎಂದು ಶಾಸನ ಮಾಡಿ, ಬಾಲ್ಯವಿವಾಹ ಮಾಡುವವರನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತಿದ್ದರೂ, ‘ಬಾಲ್ಯವಿವಾಹಿತ ಹೆಣ್ಣಮಕ್ಕಳನ್ನು ರಕ್ಷಿಸಿ’ ಎಂದು ಹೇಳಲೇಬೇಕಾಗಿದೆ. ಕಾರಣ ಸಕರ್ಾರ,ಬಾಲ್ಯವಿವಾಹ ನಿಷೇಧ ಕಾಯಿದೆ 2006 ಜಾರಿಗೆ ಬಂದದ್ದು 1 ನವೆಂಬರ್ 2007ರಿಂದ. ಈ ಕಾಯಿದೆಗೆ ಕನರ್ಾಟಕ ಸಕರ್ಾರ 2016ರಲ್ಲೇ ತಿದ್ದುಪಡಿಗಳನ್ನು ಸೂಚಿಸಿದೆ. ಆ ತಿದ್ದುಪಡಿಗಳು 2018ರ ಮಾಚರ್್ನಿಂದ ಜಾರಿಯಲ್ಲಿವೆ. ಆ ತಿದ್ದುಪಡಿಗಳನ್ನೂ ಸೇರಿಸಿಕೊಂಡು ಕಾಯಿದೆಯಲ್ಲಿ ಸ್ಪಷ್ಟ ಪಡಿಸಿರುವ ಕೆಲವು ಮುಖ್ಯಾಂಶಗಳು ಈ ಮುಂದಿನಂತಿವೆ.

18 ವರ್ಷದೊಳಗಿನ ಹೆಣ್ಣಮಕ್ಕಳಿಗೆ ಮತ್ತು 21 ವರ್ಷದೊಳಗಿನ ಗಂಡುಮಕ್ಕಳಿಗೆ ವಿವಾಹ ನಿಷೇಧಿಸಲಾಗಿದೆ; ಬಾಲ್ಯವಿವಾಹಗಳನ್ನು ತಡೆಗಟ್ಟಲು ನ್ಯಾಯಾಲಯದಿಂದ ತಡೆ ಆಜ್ಞೆ ಪಡೆಯಬಹುದು; ಬಾಲ್ಯವಿವಾಹಗಳನ್ನು ತಡೆಯಲೆಂದೇ ಸಕರ್ಾರ ‘ಬಾಲ್ಯವಿವಾಹ ನಿಷೇಧಾಧಿಕಾರಿ’ಗಳನ್ನು ನೇಮಿಸಬೇಕು; ಬಾಲಕಿ/ಬಾಲಕರನ್ನು ವಿವಾಹವಾದ ವಯಸ್ಕರು, ಬಾಲ್ಯವಿವಾಹ ಏರ್ಪಡಿಸಿದವರು, ಸಹಾಯ ಮಾಡಿದವರು ಮತ್ತು ಮದುವೆಯಲ್ಲಿ ಭಾಗವಹಿಸಿದವರಿಗೆಲ್ಲಾ ಒಂದು ವರ್ಷದಿಂದ ಎರಡು ವರ್ಷಗಳವರೆಗೆ ಕಾರಾಗೃಹ ಶಿಕ್ಷೆ; 18 ವರ್ಷದೊಳಗಿನ ಹೆಣ್ಣುಮಗು ತನಗೆ ಈ ಮದುವೆ ಬೇಡವೆಂದರೆ ಅವಳಿಗೆ 20 ವರ್ಷವಾಗುವುದರೊಳಗೆ ಮದುವೆಯಿಂದ ಹೊರಬರಲು ನ್ಯಾಯಾಲಯದ ಆದೇಶ ಪಡೆಯಬಹುದು; ಅವಳಿಗೆ ಮತ್ತು ಅವಳಿಗೇನಾದರೂ ಮಕ್ಕಳಾಗಿದ್ದರೆ, ಅವರಿಬ್ಬರಿಗೂ ಗಂಡನ ಮನೆಯವರಿಂದ ಪರಿಹಾರ ಪಡೆಯಬಹುದು ಮತ್ತು ಎಲ್ಲ ಬಾಲ್ಯವಿವಾಹ ಪ್ರಕರಣಗಳನ್ನು ಮಾಹಿತಿ ದೊರೆತ ಕೂಡಲೇ ಪೊಲೀಸರು ವಿಚಾರಣಾರ್ಹ ಮತ್ತು ಜಾಮೀನು ರಹಿತ ಅಪರಾಧಗಳೆಂದು ಪರಿಗಣಿಸಿ ತಾವೇತಾವಾಗಿ ಕ್ರಮಕೈಗೊಳ್ಳಬೇಕು.

ಒಮ್ಮೆ ಮದುವೆ ನಡೆದುಹೋದರೆ ಆಮೇಲೆ ಯಾರಿಗೂ ಏನೂ ಮಾಡಲಾಗದು ಎನ್ನುವ ಸಾಮೂಹಿಕ ಭಾವನೆಯಿಂದಾಗಿ ಕದ್ದುಮುಚ್ಚಿಯೋ, ರಾಜಾರೋಷವಾಗಿಯೋ ಈಗಲೂ ಜನ ಬಾಲ್ಯವಿವಾಹಗಳನ್ನು ನಡೆಸುತ್ತಿದ್ದಾರೆ. ಆದರೆ, ಬಾಲ್ಯವಿವಾಹಕ್ಕೀಡಾದ ಹೆಣ್ಣುಮಗು ಮುಂದಿನ ದಿನಗಳಲ್ಲಿ ಅನುಭವಿಸುವ ತೊಂದರೆ, ಕಷ್ಟ ಮತ್ತು ಆ ವಿವಾಹವನ್ನು ಪ್ರಾಪ್ತ ವಯಸ್ಸಿನ ವಧುವಿನ ಮದುವೆಯೆಂದು ಸುಳ್ಳು ಪುರಾವೆ ಕೊಡಲು ಅವಳು ಮತ್ತು ಕುಟುಂಬ ಹಾಗೂ ಸುತ್ತಮುತ್ತಲಿನವರು ಪಡುವ ಕಷ್ಟ ನೂರಾರು.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2015-16ರ ವರದಿಯಂತೆ ‘ಸಮೀಕ್ಷಾ ಸಮಯದಲ್ಲಿ ಈಗಾಗಲೇ ತಾಯಿ ಅಥವಾ ಗಭರ್ಿಣಿಯಾಗಿರುವ 15-19 ವಯೋಮಾನದವರ ಪ್ರಮಾಣ ದೇಶದಲ್ಲಿ 7.9%’. ಕನರ್ಾಟಕದಲ್ಲಿ ಈ ಪ್ರಮಾಣ 7.8%. ಇಷ್ಟೇ ತಾನೇ, ಬಾಲ್ಯವಿವಾಹಗಳಿಂದ ಏನೂ ಕಷ್ಟವಿಲ್ಲ ಎನ್ನುವವರಿಗೆ ತಿಳಿಸಲೇಬೇಕಾದ ವಿಚಾರ, ಕನರ್ಾಟಕದಲ್ಲಿ 15-19 ವಯೋಮಾನದ 44.7% ಹೆಣ್ಣಮಕ್ಕಳಲ್ಲಿ ರಕ್ತಹೀನತೆಯಿದೆ. ಈ ವಯೋಮಾನದವರು ಗರ್ಭ ಧರಿಸಿ ಮಕ್ಕಳನ್ನು ಹೆತ್ತಾಗ ಅವರ ಮಕ್ಕಳು ಅತ್ಯಂತ ದುಸ್ಥಿತಿಯಲ್ಲಿ ಬದುಕು ಆರಂಭಿಸುತ್ತಾರೆ. ಅಂತಹ ಮಕ್ಕಳು ಸಮರ್ಪಕ ತೂಕವಿರುವುದಿಲ್ಲ, ಆರೋಗ್ಯವಾಗಿ ಬೆಳೆಯುವುದಿಲ್ಲ. ಈ ಮಕ್ಕಳು ಸಾಯಲೂಬಹುದು ಮತ್ತು ಮೇಲಿಂದ ಮೇಲೆ ಅನಾರೋಗ್ಯಕ್ಕೆ ಈಡಾಗಬಹುದು. ಯಾರು ಬಹಳ ಕೆಟ್ಟ ದೈಹಿಕ ಪರಿಸ್ಥಿತಿಯಲ್ಲಿ ಬೆಳೆಯುತ್ತಾರೋ, ಅವರು ಮುಂದೆ ಆ ತೊಂದರೆಯಿಂದ ಹೊರಬರಲು ಬಹಳ ಕಷ್ಟಪಡುತ್ತಾರೆ. ಇದೊಂದು ರಾಷ್ಟ್ರೀಯ ನಷ್ಟ. ಈ ಹಿನ್ನೆಲೆಯಲ್ಲಿ ಎಲ್ಲ ಸಮುದಾಯಗಳು ಬಾಲ್ಯವಿವಾಹಗಳನ್ನು ತಡೆಯಲು ಮತ್ತು ಅಕಸ್ಮಾತ್ ಬಾಲ್ಯವಿವಾಹವಾದವರನ್ನು ರಕ್ಷಿಸಿ ಗರ್ಭ ಧರಿಸದಂತೆ ಎಚ್ಚರಿಸಲು, ಶಿಕ್ಷಣ, ಮಾಹಿತಿ ಪಡೆಯಲು ನೆರವಾಗಲು ಮುಂದಾಗಬೇಕಿದೆ.
ಹೀಗಾಗಿ 1 ನವೆಂಬರ್ ರಾಷ್ಟ್ರೀಯ ಮಟ್ಟದಲ್ಲಿ ‘ಬಾಲ್ಯವಿವಾಹದ ಪಿಡುಗನ್ನು ತಡೆಗಟ್ಟಲು ಗಮನಿಸಬೇಕಾದ ದಿನ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s