” ಸೌಮ್ಯ” ( ವಿಭಿನ್ನ ಕಿರುಚಿತ್ರ )
ಇತ್ತಿಚಿನ ದಿನಗಳಲ್ಲಿ ಕಿರುಚಿತ್ರವೆಂದರೆ ಅತಿಹೆಚ್ಚು ಪ್ರೀತಿ ಪ್ರೇಮದ ವಿಚಾರವಾಗಿ ಹಾಗೂ ಬೆರಳೆಣಿಕೆಯಷ್ಟೆ ಸಾಮಾಜಿಕ ಸಂದೇಶ ನೀಡುವಂತ ಚಿತ್ರಗಳಂತಾಗಿ ಹೋಗಿವೆ . ಇಂತಹ ಕಿರು ಚಿತ್ರಗಳ ನಡುವೆ ವಿಭಿನ್ನ ವಿಶಿಷ್ಟ ಹಾಗೂ ವಿಶೇಷವಾದ ಉತ್ತಮ ಸಂದೇಶ ಸಾರುವಂತ ವಿಷಯವನ್ನು ತೆಗೆದುಕೊಂಡು ” ಸೌಮ್ಯ ” ಎಂಬ ಕಿರು ಚಿತ್ರವನ್ನು ವಿನಯ್ ಶಿವಗಂಗೆ ಅವರು ನಿರ್ದೇಶಿಸಿದ್ದು ಆರ್ ಜೆ ಪ್ರಿಯಾಂಕ ಅವರು ಚಿತ್ರಕ್ಕೆ ಜೀವತುಂಬಿದ್ದು ಸಮಾಜಕ್ಕೆ ಉತ್ತಮ ಸಂದೇಶ ನೀಡಲು ಹೊರಟಿದ್ದಾರೆ .
ನಮ್ಮ ಜೊತೆಯಲ್ಲಿಯೇ ಇದ್ದು ಇಲ್ಲದಂತಿರುವ ತೃತೀಯ ಲಿಂಗಿಗಳ ( ಟ್ರಾನ್ಸ್ ಜೆಂಡರ್ ) ದೈಹಿಕ ಹಾಗೂ ಮಾನಸಿಕ ನೋವು ವ್ಯಥೆ ಹಾಗೂ ಅವರ ಬದುಕಿನ ಬಗ್ಗೆ ಕೆಲವು ನಿಮಿಷದಲ್ಲಿ ಕಟ್ಟಿಕೊಡುವಲ್ಲಿ ತುಂಬಾ ಪ್ರಯತ್ನವನ್ನು ಪಟ್ಟಿದ್ದಾರೆ .
ಮುಖ್ಯ ಪಾತ್ರದಲ್ಲಿ ಅದೇ ಕಮಿಟಿಯ , ಆರ್ ಜೆ ಯಾಗಿ ಕಾರ್ಯ ನಿರ್ವಹಿಸುತ್ತಿರುವ ಮೊಟ್ಟ ಮೊದಲ ಭಾರತದ ಟ್ರಾನ್ಸ್ ಜೆಂಡರ್ ಆರ್ ಜೆ ಪ್ರಿಯಾಂಕಾ ಅವರು ತಮ್ಮ ನಟನೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಅವರ ಪಾತ್ರಕ್ಕೆ ಜೀವತುಂಬಿದ್ದಾರೆ .
ಕಿರು ಚಿತ್ರದ ಮೊದಲ ಪೋಸ್ಟರ್ ಫೇಸ್ ಬುಕ್ ವಾಟ್ಸಪ್ ಹಾಗು ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿಯೂ ಒಂದು ರೀತಿಯ ಅಲೆಯನ್ನೇ ಸೃಷ್ಟಿಸಿದ್ದು ಎಲ್ಲರ ಮನವು ಕಾತರದಿಂದ ಕಾಯುವಂತೆ ಮಾಡಿದೆ .
ಈ ಕಿರುಚಿತ್ರದ ಬಗ್ಗೆ ರೇಡಿಯೋ ಆಕ್ಟಿವ್ ೯೦. ೪ ನಲ್ಲಿ ಆರ್ ಜೆ ಪ್ರಿಯಾಂಕಾ ಅವರ ಸೌಮ್ಯ ಕಿರು ಚಿತ್ರದ ಬಗ್ಗೆ ತಮ್ಮ ಮನದಾಳದ ಮಾತನ್ನು ಹಾಗೂ ಕೆಲವು ಸನ್ನಿವೇಶವನ್ನು ವಿನಯ್ ಶಿವಗಂಗೆ ಅವರು ಹಂಚಿಕೊಂಡಿದ್ದಾರೆ ನೀವು ಸಹಾ ಕೇಳಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಸಹೃದಯ ಮನಸುಗಳೆ .
ಇನ್ನೇನು ಕೆಲವು ದಿನಗಳಲ್ಲಿ ನಾವು ನೀವು ಕಾತುರದಿಂದ ಕಾಯುತಿರುವ ” ಸೌಮ್ಯ ” ಕಿರು ಚಿತ್ರವು ನಿಮ್ಮ ಮುಂದೆ ಬರಲಿದೆ ಹರಸಿ ಆಶೀರ್ವಾದಿಸಿ ಸ್ನೇಹಿತರೆ…
Listen in!