Radio Active COVID-19 Special with Vasudeva Sharma of CRT: Protecting Children in the Time of Corona Virus Lockdown

ಕೊರೋನಾ ಮತ್ತು ಮಕ್ಕಳು

1.   ಕೊರೋನಾ ಈಗ ಒಂದು ಪ್ಯಾಂಡೆಮಿಕ್‌ ಅಥವಾ ಸಾಂಕ್ರಾಮಿಕ ರೋಗ ಆಗಿಬಿಡುತ್ತಿದೆ ಅಂತ ಹೇಳಲಾಗುತ್ತಿದೆ. ಕೊರೋನಾ ವೈರಸ್‌ ನಿಜವಾಗಿಯೂ ಎಲ್ಲರನ್ನೂ ಸಾಯಿಸಿಬಿಡುತ್ತದೆ ಅಂತ ಮಕ್ಕಳು ಹೆದರುತ್ತಿದ್ದಾರೆ. ಅದು ನಿಜವಾಗಿಯೂ ಎಲ್ಲರನ್ನು ಕೊಂದುಬಿಡುತ್ತದೇನು? ಏನಿದು ಪ್ಯಾಂಡೆಮಿಕ್‌ ಅಥವಾ ಸಾಂಕ್ರಾಮಿಕ ಎಂದರೆ? 

ಹೆದರುವ ಅವಶ್ಯಕತೆಯಿಲ್ಲ. ಶೇ. ೯೦ರಷ್ಟು ಸೋಂಕಿತರು ಸುಧಾರಿಸಿಕೊಳ್ಳುತ್ತಿದ್ದಾರೆ. ಸಾಂಕ್ರಾಮಿಕ – ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಸೋಂಕು ಉಂಟಾಗುವುದು. ಹಿಂದೆ ನಮ್ಮಲ್ಲಿ ಪ್ಲೇಗ್‌, ಕಾಲರಾ, ಸಿಡಿಬು, ಸಾಂಕ್ರಾಮಿಕವಾಗಿದ್ದು ಕೇಳಿದ್ದೇವೆ. ಮೊದಲು ಈ ರೋಗ ಭಾರತದಂತಹ ದೇಶಕ್ಕೆ ಬೇರೆ ದೇಶಗಳಿಂದ ಬಂದಿತು. ಮುಖ್ಯ ಚೀನಾ ದೇಶದಿಂದ ಬೇರೆ ದೇಶಗಳಿಗೆ ತಮಗೇ ತಿಳಿಯದಂತೆ ಜನರೇ ಒಯ್ದಿದ್ದಾರೆ. ಅದನ್ನು ಆಮದಾಗಿರುವುದು ಎನ್ನಬಹದು.  ಹಾಗೆ ಬಂದದ್ದು ನಂತರ ಇಲ್ಲಿನ ಜನರಿಗೆ ಹರಡುತ್ತಿದೆ. ಅದು ಸಾಂಕ್ರಾಮಿಕ. ಸದಸ್ಯದಲ್ಲಿ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಹರಡಿಲ್ಲದಿದ್ದರೂ, ನಾವು ಬೇಜವಾಬ್ದಾರಿ ವಹಿಸಿದರೆ ಅತ್ಯಂತ ಹೆಚ್ಚಿನ ಜನರಿರುವ ಬಹಳ ಹತ್ತಿರ ಹತ್ತಿರ ವಾಸಿಸುವ ನಮ್ಮ ದೇಶದಲ್ಲಿ ಬಹಳ ಸುಲಭವಾಗಿ ಮನೆಮನೆಗೆ ಹರಡುವ ಸಾಧ್ಯತೆ ಇದೆ. ಆಗ ತಡೆಗಟ್ಟುವುದಾಗಲೀ ಚಿಕಿತ್ಸೆ ಕೊಡುವುದಾಗಲೇ ಅಸಾಧ್ಯ ಎಂಬಂತಾಗುತ್ತದೆ. ಹೀಗಾಗಿ ಈ ವೈರಸ್‌ ಹರಡದಂತೆ ಎಚ್ಚರಿಕೆ ವಹಿಸಬೇಕು.

2.   ವೈರಸ್‌ ಎಂದರೇನು?  ಈ ವೈರಸ್‌ ಯಾಕೆ ಅಷ್ಟೊಂದು ಹೆದರಿಸುವಂತೆ ಮುಖ್ಯವಾಗಿದೆ?

ಸೂಕ್ಷ್ಮಾಣು. ಕಣ್ಣಿಗೆ ಕಾಣುವುದಿಲ್ಲ. ಹಿಂದೆ ಬಂದು ದುರಂತ ಮಾಡಿದ್ದ ಎಲ್ಲ ವೈರಸ್‌ಗಳ ಲಕ್ಷಣ, ಅದರ ಗುಣಸ್ವಭಾವಗಳನ್ನ ಅಧ್ಯಯನ ಮಾಡಿದ್ದಾರೆ. ಉದಾ. ಪೋಲಿಯೋ, ಪ್ಲೇಗ್‌, ದಡಾರ ಇತ್ಯಾದಿ. ಆದರೆ ಈ ವೈರಸ್‌ ಹೊಸತು. ವಿಜ್ಞಾನಿಗಳಿಗೂ ಹೆಚ್ಚು ತಿಳಿದಿಲ್ಲ. ನಮ್ಮ ದೇಹಗಳಿಗೂ ಗೊತ್ತಿಲ್ಲ. ಉದಾ.ಪೋಲಿಯೋ ವೈರಸ್‌ಗೆ ನಮ್ಮಲ್ಲಿ ರೋಗನಿರೋಧಕ ಇದೆ. ಇಂಜಕ್ಷನ್‌, ಹನಿ ರೂಪದಲ್ಲಿ ನಮಗೆಲ್ಲಾ ಕೊಟ್ಟಿದ್ದಾರೆ. ಆದರೆ ಇದು ಹೊಸ ವೈರಸ್‌. ಇದರ ಬಗ್ಗೆ ನಮ್ಮ ಯಾರ ದೇಹಕ್ಕೂ ತಿಳಿದಿಲ್ಲ. ಹೀಗಾಗಿ ಇದರಿಂದ ಹೆದರಿಕೆ ಹೆಚ್ಚು. ಇನ್ನು ಕೆಲವೇ ದಿನಗಳಲ್ಲಿ ಇದಕ್ಕೂ ರೋಗ ನಿರೋಧಕ ಲಸಿಕೆ ಅಥವಾ ಇಮ್ಯನೈಸೇಷನ್‌ ಕಂಡುಹಿಡಿಯುತ್ತಾರೆ ಮತ್ತು ಎಲ್ಲರಿಗೂ ಕೊಡುವ ಏರ್ಪಾಡು ಆಗಬಹುದು. 

3.   ಯಾಕೆ ಯಾರನ್ನೂ ಹೊರಗಡೆ ಓಡಾಡಲು ಬಿಡುತ್ತಿಲ್ಲ ಮತ್ತು ಹೊರದೇಶಗಳು, ಊರುಗಳಿಂದಲೂ ಜನರನ್ನು ಬರಲು, ಹೋಗಲು ಬಿಡುತ್ತಿಲ್ಲ?

ಜನರಿಂದ ಜನರಿಗೆ ರೋಗ ಹರಡುವ ಅಪಾಯ ಇರುವುದರಿಂದ…

4.   ಈ ವೈರಸ್‌ ಹೇಗೆ ಹರಡುತ್ತೆ? ಎಂತಹ ಎಚ್ಚರಿಕೆ ವಹಿಸಲೇಬೇಕು?

ಹರಡುವ ವಿಧಾನಗಳು. ಕೆಮ್ಮು, ಸೀನು – ಎಂಜಲು, ಸಿಂಬಳ ಹಾರುವುದು. ಮೂಗು ಮೂತಿ ಒರೆಸಿಕೊಂಡು ಏನನ್ನಾದರೂ ಮುಟ್ಟಿದಾಗ ವೈರಸ್‌ ಅಲ್ಲಿರುತ್ತದೆ. ಬೇರೆಯವರು ಅದನ್ನು ಮುಟ್ಟಿ ಮತ್ತೆ ಅವರ ಮೂಗು, ಬಾಯಿ, ಕಣ್ಣೂ ಮುಟ್ಟಿಕೊಂಡರೆ ಖಂಡಿತಾ ವೈರಸ್‌ ದೇಹ ಸೇರುತ್ತದೆ. ಹೀಗಾಗಿ ರೋಗ ಲಕ್ಷಣಗಳಿರುವವರು ತಮ್ಮ ಬಾಯಿ, ಮೂಗನ್ನು ಸದಾ ಮಾಸ್ಕ್‌ನಿಂದ ಮುಚ್ಚಿಕೊಳ್ಳಬೇಕು. ನಾವು ಸೋಪು ಬಳಸಿ ಕೈತೊಳೆದುಕೊಳ್ಳಬೇಕು. ಈ ವೈರಸ್‌ನ ಹೊರಭಾಗವನ್ನು ಸೋಪ್‌ ನೊರೆ ಕರಗಿಸುತ್ತದೆ ಎಂದು ಹೇಳಲಾಗಿದೆ. ಹೀಗಾಗಿ ಸೋಪು ನೀರು ಅಥವ ಸ್ಯಾನಿಟೈಸರ್‌ ಬಳಸಬೇಕು. ನೊಣದಿಂದ ಈ  ವೈರಸ್‌ ಹರಡುತ್ತೆ ಅಂತಾ ಹೇಳ್ತಿದ್ದಾರೆ. ಅದು ಇನ್ನೂ ಖಚಿತವಾಗಿಲ್ಲ. ಆದರೆ ನಾವು ನಮ್ಮ ಎಚ್ಚರಿಕೆಯಿಂದ ಇರಬೇಕು. ಹೊರಗಡೆ ಎಲ್ಲೆಲ್ಲೋ ಕಕ್ಕಸ್ಸು ಮಾಡಬಾರದು. ನೊಣ ಬರದಂತೆ ನೋಡಿಕೊಳ್ಳುವುದು ಒಳ್ಳೆಯದು.

5.     ಈ ರೋಗದ ಲಕ್ಷಣಗಳಾವುವು?

ಒಣ ಕೆಮ್ಮು, ಶೀತ, ಜ್ವರ, ತಲೆನೋವು, ಉಸಿರಾಟದ ತೊಂದರೆ.  ಇದು ಹೆಚ್ಚಾಗಿ ನ್ಯೂಮೋನಿಯಾ ಅತಿಯಾದ ಉಸಿರಾಟದ ತೊಂದರೆ ಮುಂದೆ ಕಿಡ್ನಿ ವೈಫಲ್ಯವಾಗಿ ಸಾವನ್ನುಂಟು ಮಾಡಬಹುದು.

6.     ಇದರಿಂದ ತಪ್ಪಿಸಿಕೊಳ್ಳಲು ನಾವೇನು ಮಾಡಬೇಕು? ಎಂತಹ ಎಚ್ಚರಿಕೆ ವಹಿಸಿಕೊಳ್ಳಬೇಕು?

ಕೆಮ್ಮುವಾಗ, ಸೀನುವಾಗ ಕರವಸ್ತ್ರದಿಂದ ಮುಚ್ಚಿಕೊಳ್ಳುವುದು. ಬಹಳ ಮುಖ್ಯವಾಗಿ ಹೊರಬರದಿರುವುದು, ದೂರವಿರುವುದು, ಆದಷ್ಟೂ ಮನೆಯೊಳಗೇ ಇದ್ದು ಆಡಿಕೊಳ್ಳುವುದು, ಓದುವುದು, ಮಾತಾಡುವುದು, ಕತೆ ಓದುವುದು, ಇತ್ಯಾದಿ. ಹೊರ ಹೋಗಲೇಬೇಕೆಂದಿದ್ದರೆ ಎಚ್ಚರಿಕೆ ವಹಿಸಬೇಕು.

7.     ಇದನ್ನು ಪಾಲಿಸದಿದ್ದರೆ ಏನಾಗುತ್ತದೆ? 

ಅನೇಕ ದೇಶಗಳಲ್ಲಿ ಮುಖ್ಯವಾಗಿ ಇಟಲಿ, ಇರಾನ್‌, ಅಮೇರಿಕಾ, ಇಂಗ್ಲೆಂಡ್‌ ದೇಶಗಳಲ್ಲಿ ಈಗಾಗಲೇ ಅದು ಹೇಗೆ ವೇಗವಾಗಿ ಹರಡಿತೋ ಜನರನ್ನು ಬಲಿ ತೆಗೆದುಕೊಳ್ಳುತ್ತಿದೆಯೋ ಹಾಗೆ ಆಗಬಹುದು. ನಾವು ಹೊರಗಡೆ ಓಡಾಡಿದಾಗ ನಮಗೆ ಸೋಂಕು ಉಂಟಾದಲ್ಲಿ ನಮಗೆ ನಮ್ಮದೇ ರೋಗನಿರೋಧಕ ಶಕ್ತಿಯಿಂದಾಗಿ ವಾಸಿಯಾಗಬಹುದೇನೋ. ಆದರೆ ಮನೆಯಲ್ಲಿರುವ ಹಿರಿಯರಿಗೆ ನಾವು ರೋಗ ಅಂಟಿಸಿದರೆ ಅವರು ಸಾಯಬಹುದು. ನಾವು ಇನ್ನೂ ಅನೇಕರಿಗೆ ಒಬ್ಬರಿಂದ ಇನ್ನೊಬ್ಬರಿಗೆ ನಮ್ಮ ನೆರೆಹೊರೆಯಲ್ಲಿ ರೋಗ ಹರಡಿದರೆ ಎಲ್ಲರೂ ಒಟ್ಟಾಗಿ ಸತ್ತೇ ಹೋಗಬಹುದು. 

8.    ನಾವೆಲ್ಲಾ ಎಚ್ಚರಿಕೆ ಎಂದರೆ ಕೈತೊಳೆಯುವುದು ಎನ್ನುತ್ತಿದ್ದಾರೆ. ಏನು ಮಾಡಬೇಕು? ಸರಿಯಾಗಿ ಕೈತೊಳೆದುಕೊಳ್ಳುವುದೆಂದರೆ.

ಸೋಪು ಬಳಸಿ ಕೈತೊಳೆಯುವುದು ಕನಿಷ್ಟ ೩೦ ಸೆಕೆಂಡ್‌; ಅಂಗೈ ಮತ್ತು ಹಿಂಗೈ, ಬೆರಳುಗಳ ಮಧ್ಯ, ಹೆಬ್ಬೆಟ್ಟು, ಮಣಿಕಟ್ಟು ಆಮೇಲೆ ಒರೆಸಿ. ಜೊತೆಗೆ ಯಾರನ್ನೂ ಮುಟ್ಟದಿರುವುದು. ಉದಾಹರಣೆಗೆ ನಮಸ್ಕಾರ, ಅಸ್ಸಲಾಂ ಅಲೇಕುಂ. ಸತ್‌ ಶ್ರೀ ಅಕಾಲ್‌ ಜೀ, ಎಲ್ಲರಿಗೂ ಹಲೋ, ಇತ್ಯಾದಿ. ಹೊರಗೆ ಹೋಗಲೇಬೇಕೆಂದರೆ ಮಾಸ್ಕ್‌ ಬೇಕು. ಮುಖ್ಯವಾಗಿ ರೋಗಗ್ರಸ್ಥರು ಹಾಕಿಕೊಳ್ಳಬೇಕು. ಅನೋರೋಗ್ಯವುಳ್ಳವರಿಗೆ ಚಿಕಿತ್ಸೆ ಕೊಡುವವರು ಆದರೀಗ ಹೊರ ಬರುವವರೆಲ್ಲರೂ ಹಾಕಬೇಕು ಎನ್ನುತ್ತಿದ್ದಾರೆ. ಸರಳವಾಗಿ ಕರ್ಚೀಪಿನಿಂದ ಮಾಸ್ಕ ಮಾಡಿಕೊಳ್ಳಬಹುದು. ಆದರೆ ಅದರಿಂದ ಬಹಳ ಉಪಯೋಗ ಎನ್ನುವಂತಿಲ್ಲ. ಸರ್ಜಿಕಲ್‌ ಮಾಸ್ಕ್‌ ಒಮ್ಮೆ ಬಳಸಿದರೆ ನಾಲ್ಕೈದು ಗಂಟೆಗಳ ನಂತರ ಅದನ್ನು ಕಸದ ಬುಟ್ಟಿಯಲ್ಲೇ ಹಾಕಿ ಮುಚ್ಚಬೇಕು. ದೂರ ದೂರ ಅಂದರೆ ಕನಿಷ್ಟ ೩ ಅಡಿ ಅಥವಾ ಒಂದು ಮೀಟರ್‌ ದೂರದಿಂದಲೇ ಎಲ್ಲರನ್ನೂ ಮಾತನಾಡಿಸಬೇಕು. ಹೊರಗೆ ಜನ ಹೆಚ್ಚಿರುವ ಕಡೆ ಹೋಗಬಾರದು. ಪ್ರಯಾಣ ಬೇಡ; ಆಹಾರ ವಿಹಾರದಲ್ಲೂ ಎಚ್ಚರಿಕೆ. ಬಹಳ ಮುಖ್ಯವಾಗಿ ಹಸಿ ಮಾಂಸ ತಿನ್ನಬಾರದು.  ಸರಿಯಾಗಿ ಬೇಯಿಸಿದ ಮೊಟ್ಟೆ, ಮಾಂಸ, ಮೀನು ಪರವಾಗಿಲ್ಲ. ಜಂಕ್‌, ಎಣ್ನೆ ತುಂಬಾ ಬಳಸಿದ ಆಹಾರ  ಬೇಡ. 

9.    ಈಗ ಕ್ವಾರಂಟೈನ್‌ ಅಂತ  ಅಂತಿದ್ದಾರಲ್ಲ. ಹಾಗೆಂದರೇನು?

ಸೋಂಕಿಗೆ ಈಡಾದ ಜನ ಅಥವಾ ಸೋಂಕು ಆಗಿರಬಹುದು ಎಂದು ಶಂಕೆ, ಅನುಮಾನ ಇರುವ ಜನರನ್ನು ಇತರರನ್ನು ಭೇಟಿ ಮಾಡದಂತೆ, ಹೊರಗೆ ಬಂದು ಇತರರಿಗೆ ಸೋಂಕು ಅಂಟಿಸದಂತೆ ಒಂಟಿಯಾಗಿಡುವುದು. ಅದು ಮುಖ್ಯವಾಗಿ ೧೪ ದಿನಗಳ ಕಾಲ ದೂರವಿಡುವುದು. ಅದೊಂದು ರೀತಿ ತೀರಾ ಆವಶ್ಯಕವಾದ ನಡೆ. ಸೋಂಕಿರುವ ಜನರೊಡನೆ ಭೇಟಿಯಾದವರು, ಜೊತೆಯಲ್ಲಿದ್ದವರೆಲ್ಲರೂ ಇದನ್ನು ತಾವೇ ತಾವಾಗಿ ಪಾಲಿಸಬೇಕು. ಇದು ಅವರಿಗೆ ಸೋಂಕು ಇದೆಯೋ ಇಲ್ಲವೋ ಎಂದು ತಿಳಿಯಲಿಕ್ಕೆ ಸಹಕಾರಿ.

ದುರಾದೃಷ್ಟವಶಾತ್‌ ಕೆಲವು ವೈದ್ಯರು ಯಾರು ಚಿಕಿತ್ಸೆ ನೀಡುತ್ತಿದ್ದಾರೋ ಅವರೇ ರೋಗಕ್ಕೆ ಬಲಿಯಾಗಿದ್ದಾರೆ.

10.    ನಮಗೇನಾದರೂ ಅಥವಾ ನಮ್ಮ ಮನೆಯಲ್ಲಿ ನೆರೆಹೊರೆಯಲ್ಲಿ ರೋಗ ಲಕ್ಷಣ ಕಂಡರೆ?

ರೋಗ ಲಕ್ಷಣ ಕಂಡುಬಂದವರನ್ನು ದೂಶಿಸುವುದು ಬೇಡ. ದೂರ ಮಾಡುವುದು ಬೇಡ. ಅವರೂ ನಮ್ಮಂತೆಯೇ ಮನುಷ್ಯರು. ಮೊದಲು ಹತ್ತಿರದ ವೈದ್ಯರನ್ನು ಸಂಪರ್ಕಿಸಿ. ರೋಗ ಲಕ್ಷಣಗಳು ಖಚಿತವಾದರೆ ಆಗ ಕರೋನಾ ಪರೀಕ್ಷಾ ಕೇಂದ್ರಗಳಿಗೆ ಹೋಗಬೇಕು. ಈಗ ಆಂಬುಲೆನ್ಸ್‌ ೧೦೮ ಗೆ ಸಂಪರ್ಕಿಸಿ. ಇಲ್ಲವೇ ೧೦೪ಕ್ಕೆ ದೂರವಾಣಿ ಕರೆ ಮಾಡಿ.  ೦೮೦ ೪೬೮೪೮೬೦೦ ಅಥವಾ ೦೮೦ ೬೬೬೯೨೦೦೦; ರಾಷ್ಟ್ರೀಯ ಸಂಖ್ಯೆ ೧೦೭೫ಕ್ಕೂ ದೂರವಾಣಿ ಮಾಡಬಹುದು;

11.   ಮಕ್ಕಳ ಶಾಲೆಗಳನ್ನು ಮುಚ್ಚಿದ್ದಾರೆ. ಪರೀಕ್ಷೆ ಮಾಡಿಲ್ಲ ಅಂದರೆ ಹೇಗೆ ಮಕ್ಕಳಿಗೆ ಉಪಯೋಗ ಅಥವಾ ತೊಂದರೆ?

ಸದ್ಯ ಚಿಕ್ಕ ಚಿಕ್ಕ ತರಗತಿಗಳ ಮಕ್ಕಳಿಗೆ ಪರೀಕ್ಷೆ ಇಲ್ಲದೆಯೇ ಮುಂದಿನ ತರಗತಿಗಳಿಗೆ ಉತ್ತೀರ್ಣರನ್ನಾಗಿಸಿದ್ದಾರೆ. ಆದರೆ ೭, ೧೦ನೇ ತರಗತಿಗೆ ಮತ್ತು ಇತರ ಉನ್ನತ ಅಭ್ಯಾಸಗಳಿಗೆ ಮುಂದೆ ಪರೀಕ್ಷೆ ಮಾಡ್ತಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s