In this COVID-19 Special Series episode, Chandramma and Marappa – both activists who were rescued from bonded labour – talk about the ways in which Udayonmukha is raising awareness and supplies for some of the most vulnerable workers during the lockdown.

ಇಂದು ಕೋವಿಡ್-19 (ಕೊರೊನ ವೈರಸ್) ಸಮಸ್ಯೆಯಿಂದ ರಾಜ್ಯದಲ್ಲಿ ಹೆಚ್ಚಾಗಿ ತೊಂದರೆಗೊಳಗಾಗಿರುವವರು ದಿನಗೂಲಿ ಕಾರ್ಮಿಕರು. ಇಂದಿನ ಸಂಚಿಕೆಯಲ್ಲಿ, ಜೀತ ಕಾರ್ಮಿಕತೆಯಿಂದ ಬಿಡುಗಡೆಯಾದ ಚಂದ್ರಮ್ಮ ಹಾಗೂ ಮಾರಪ್ಪ ಅವರು ಕೋವಿಡ್-19 ನ ನಿಮಿತ್ತದ ಲಾಕ್ ಡೌನ್ ನಿಂದಾಗಿ ಕಾರ್ಮಿಕರಿಗೆ ಯಾವ ಯಾವ ತೊಂದರೆಗಳಾಗುತ್ತಿದೆ ಹಾಗೂ ಅವರು ಹೇಗೆ ಸಮುದಾಯಗಳ ನಡುವೆ ಜಾಗೃತಿ ಮೂಡಿಸುತ್ತಿದ್ದಾರೆ ಎಂಬುದನ್ನು ಹಂಚಿಕೊಂಡರು.
ಚಂದ್ರಮ್ಮರವರನ್ನು 2019 ರಂದು ರೇಷ್ಮೆ ನೂಲು ಬಿಚ್ಚಾಣಿಕೆ ಘಟಕದಿಂದ ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಶಿಡ್ಲಘಟ್ಟ ನಗರ ಪೊಲೀಸ್ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಜೀತ ಪದ್ಧತಿಯಿಂದ ರಕ್ಷಿಸಿದರು. ಚಂದ್ರಮ್ಮ ಅವರು ಉದಯೋನ್ಮುಖ ಎಂಬ ಸಂಘದ ನಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಜೀತ ಕಾರ್ಮಿಕ ಪದ್ಧತಿಯಿಂದ ಬಿಡುಗಡೆಯಾದವರು ಸ್ವತಃ ರಚಿಸಿರುವ, ಜೀತ ವಿಮುಕ್ತರ ಸಂಘವಾಗಿದೆ. ಈ ಸಂಘವು ಜೀತ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಮತ್ತು ಸರ್ಕಾರದಿಂದ ಪುನರ್ವಸತಿ ಸೌಲಭ್ಯಗಳನ್ನು ಪಡೆಯುವಂತೆ ಸಹಾಯ ಮಾಡಲು, ಬಿಡುಗಡೆಯಾದ ಜೀತ ಕಾರ್ಮಿಕರನ್ನು ನಾಯಕರನ್ನಾಗಿ ಸಬಲಗೊಳಿಸುವ ಒಂದು ವೇದಿಕೆಯಾಗಿದೆ.
ಮಾರಪ್ಪರವರನ್ನು ಮಾನವ ಕಳ್ಳಸಾಗಣೆ ವಿರೋಧಿ ಘಟಕ, ಸಿಐಡಿ ಹಾಗೂ ಜಿಲ್ಲಾಡಳಿತವು 2014ನೇ ಇಸವಿಯಲ್ಲಿ ರಾಮನಗರದ ಇಟ್ಟಿಗೆ ಗೂಡೊಂದರಲ್ಲಿ ಜೀತ ಪದ್ಧತಿಯಿಂದ ರಕ್ಷಿಸಲಾಯಿತು. ಮಾರಪ್ಪರವರೂ ಸಹ ಉದಯೋನ್ಮುಖ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ರೇಡಿಯೋ ಆಕ್ಟಿವ್ ನ ಸಂದರ್ಶನದಲ್ಲಿ ಇವರುಗಳು ತಮ್ಮ ಸಂಘದ ವತಿಯಿಂದ ಕೋವಿಡ್-19 ಸಮಸ್ಯೆಯನ್ನು ತಡೆಗಟ್ಟಲು ಸಮುದಾಯಗಳ ನಡುವೆ ಹೋಗಿ ಸಾಬೂನುಗಳನ್ನು ಹಂಚಿ ಅವರಿಗೆ ಕೈ ತೊಳೆಯುವ ವಿಧಾನ ಹಾಗೂ ಅದರ ಮಹತ್ವವನ್ನು ತಿಳಿಸಿದುದರ ಬಗ್ಗೆ ಮಾತನಾಡಿದರು. ಅಷ್ಟೇ ಅಲ್ಲದೆ ಈ ಸಮಸ್ಯೆಯಿಂದ ಕೂಲಿ ಮಾಡಲು ಸಾಧ್ಯವಾಗದ ಕುಟುಂಬಗಳಿಗೆ ದಿನಸಿಯನ್ನು ಹಂಚಲು ನಡೆಸಿರುವ ತಮ್ಮ ಯೋಜನೆಯ ಬಗ್ಗೆ ಮಾತನಾಡಿದರು.
Listen in!