World Heritage Day 2020 Special: The Documentation of Kote Venkataramana Temple

In this special episode dedicated to World Heritage Day 2020, Yashaswini Sharma, who is an Architect, Author, Researcher, Urban Historian, Founder-Architect of Esthétique Architects, Associate Professor at the Dayananda Sagar College of Architecture, and member of the International Council on Monuments and Sites (ICOMOS), India, talks about the historic documentation of the Kote Venkataramana Temple. The beautiful 17th century temple stands on Krishnarajendra road in Bengaluru.

ನಮ್ಮ ಸಂಸ್ಥೆ ಎಸ್ತೆಟೀಕ್ ಅರ್ಚಿಟೆಕ್ಟ್ಸ್ ವತಿಯಿಂದ ನಾವು ಕೈಗೊಂಡಿರುವ ಕೋಟೆ ವೆಂಕಟರಮಣ ಸ್ವಾಮಿ ದೇವಸ್ಥಾನದ ವಾಸ್ತುಶಿಲ್ಪ ಹಾಗೂ ಐತಿಹಾಸಿಕ ಸಂಶೋಧನೆಯನ್ನು ಶ್ರೀಮನ್ಮಹಾರಾಜರು ತಮ್ಮ ಅಮೃತ ಹಸ್ತಗಳಿಂದ ಬಿಡುಗಡೆ ಮಾಡಿದ್ದಾರೆ. ಹಾಗೂ, ನಾವು ಮಾಡಿಸಿದ ಅವರ ಪೂರ್ವಜರಾದ ಇಮ್ಮಡಿ ಕಂಠೀರವ ನರಸರಾಜ ಒಡೆಯರವರ   ಕೊತ್ತನೂರು ಗ್ರಾಮದಲ್ಲಿರುವ ೧೭೦೫ ಇಸವಿಯ ಶಿಲಾಶಾಸನದ ಪ್ರತಿಕೃತಿಯನ್ನು ಸಹ ಅನಾವರಣ ಮಾಡಿದ್ದಾರೆ. ಇವೆರಡು ನಮ್ಮ ಕಾರ್ಯಾಲಯದ ‘ಸಂರಕ್ಷಣೆ’ ಕಾರ್ಯಕ್ರಮದ ಮೂಲಕ ನಡೆಯುತ್ತಿರುವ ಮೂರನೆಯ ಕೆಲಸ.

ನಮ್ಮ ದಾಖಲೆಯಲ್ಲಿ ದೇವಾಲಯದ ವಾಸ್ತುಶಿಲ್ಪ ಕಲೆ, ಇತಿಹಾಸ,ಸ್ಥಳ ಮಹತ್ವ ಹಾಗೂ ಪೋಷಕರ ಬಗ್ಗೆ ಉಲ್ಲೇಖವಿದೆ. ನಾವು ಈ ದೇವಸ್ಥಾನದ ಅಧ್ಯಯನ ಕಾರ್ಯವನ್ನು ಕೈಗೊಂಡಿರುವುದಕ್ಕೆ ಕಾರಣಗಳು ಹಲವಾರು. ಅದರಲ್ಲಿ ಮುಖ್ಯವಾದವುಗಳು ಎಂದರೆ –

೧. ನಮ್ಮ ಬೆಂಗಳೂರಿನ ಐತಿಹಾಸಿಕ ಸ್ಮಾರಕಗಳ ವಾಸ್ತುಶಿಲ್ಪ ಕಲೆಯ ಬಗ್ಗೆ ವಿವರಣಾತ್ಮಕ ಮಾಹಿತಿ ಇಲ್ಲದಿರುವುದು. ಕೆಲವೊಂದು ಮಾಹಿತಿ ನನ್ನ ಮೊದಲನೆಯ ಪುಸ್ತಕದಲ್ಲಿ ಎರಡು ವರ್ಷಗಳ ಹಿಂದೆ ಪ್ರಕಟವಾಗಿತ್ತು.

೨. ಒಡೆಯರ್ ವಾಸ್ತುಶಿಲ್ಪ ಕಲೆಯ ಮಾದರಿಯ ಬೆಂಗಳೂರಿನಲ್ಲಿ ಇರುವ ಮೊದಲೆನೆಯ ಸ್ಮಾರಕವಿದು. ಅವರುಗಳು ಕಟ್ಟಿಸಿರುವ ಸ್ಮಾರಕಗಳು ಹಲವಾರಿದ್ದರು, ಅವುಗಳ ಬಗ್ಗೆ ಸರಿಯಾದ ಮಾಹಿತಿಲ್ಲದಿರುವುದು ವಿಷಾದನೀಯ, ಜನರಿಗೆ ಇದರ ಬಗ್ಗೆ ಅರಿವೂ ಕಡಿಮೆ.

ನಾವು ಮಾಡಿರುವ ದೀರ್ಘ ಅಧ್ಯಯನದಿಂದ ಈ ಸ್ಮಾರಕವನ್ನು ಸಂರಕ್ಷಣೆ ಮಾಡಲು ಸುಲಭವಾಗುತ್ತದೆ ಹಾಗೂ ವಿದ್ಯಾರ್ಥಿಗಳಿಗೆ, ಇತಿಹಾಸದ ಆಸಕ್ತರಿಗೆ ಇದರ ಬಗ್ಗೆ ಮಾಹಿತಿ ದೊರೆಯುತ್ತದೆ.

ಇನ್ನು ದೇವಾಲಯದ ವಿಶೇಷಗಳ ಬಗ್ಗೆ ನಮ್ಮ ದಾಖಲೆಯಲ್ಲಿ ಇರುವ ಮಾಹಿತಿಯನ್ನು ಸಂಕ್ಷಿಪ್ತವಾಗಿ ತಿಳಿಸುತ್ತೇನೆ.

ಮೊದಲನೆಯದಾಗಿ, ಇದು ೧೭ನೆಯ ಶತಮಾನದಲ್ಲಿ ನಿರ್ಮಿತವಾದದ್ದು. ೧೭ನೆಯ ಶತಮಾನದ ಆದಿ ಕಾಲದಲ್ಲಿ ಇದ್ದ ಸಣ್ಣದಾದ ಪಾಲು ಬಿದ್ದಿದ್ದ ಗುಡಿಯನ್ನು ಅಂದಿನ ಮಹಾರಾಜರಾಗಿದ್ದ ಚಿಕ್ಕ ದೇವರಾಜ ಒಡೆಯರವರು ಜೀರ್ಣೋದ್ಧಾರ ಮಾಡಿಸಿ, ಅಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಪ್ರತಿಷ್ಠಾಪಿಸುತ್ತಾರೆ. ಏಕೆಂದರೆ ಈ ಗುಡಿಯು ಅವರು ೧೬೯೦ರಲ್ಲಿ ಕಟ್ಟಿಸಿದ ಬೆಂಗಳೂರಿನ ಕೋಟೆಯ ಬ್ರಹ್ಮಸ್ಥಾನದಲ್ಲಿ ಇರುತ್ತದೆ. ಅವರು ಕಟ್ಟಿಸಿದ ಕೋಟೆ ಮಾನಸಾರ ಹಾಗೂ ಮಾಯಾಮತ ಗ್ರಂಥಗಳು ಹೇಳುವ ದುರ್ಗಗಳ ಪೈಕಿ ಜಲದುರ್ಗವನ್ನು ಹೋಲುತ್ತದೆ. ಇಲ್ಲಿದ್ದ ಜಲ ಕಂದಕ. ಬ್ರಹ್ಮಸ್ಥಾನವೆಂದರೆ ಕೋಟೆಯ ಮಧ್ಯ ಭಾಗ. ಅಲ್ಲಿ ಅರಸರ ಖಾಸಗಿ ದೇವಾಲಯ ಹಾಗೂ ಅರಮನೆ ಇರುವುದು ರೂಢಿ. ಇದಕ್ಕೆ ಇನ್ನೊಂದು ಪ್ರಮಾಣ ಅರಮನೆಯ ಪೂರ್ವ ದಿಕ್ಕಿನಿಂದಿದ್ದ ಪ್ರವೇಶ. ಇದನ್ನು ನಾವು ೧೮ನೆಯ ಶತಮಾನದಲ್ಲಿ ಹೋಮ್ಸ್ ರಚಿಸಿದ ಬೆಂಗಳೂರಿನ ನಕ್ಷೆಯಲ್ಲಿ ಕಾಣಬಹುದು. ಸರ್ ಎಂ. ವಿಶ್ವೇಶ್ವರಯ್ಯನವರು ಕೂಡ ಕೋಟೆಯು ಹಿಂದೂ ವಾಸ್ತು ಶಾಸ್ತ್ರದ ಪ್ರಕಾರ ಇರುವುದು ಎಂದು ಅವರು ಹಾಗೂ ರಾಮಕೃಷ್ಣ ರಾವ್ ಬರೆದ ಒಂದು ವರದಿಯಲ್ಲಿ ಹೇಳುತ್ತಾರೆ.

ಎರಡೆನೆಯದಾಗಿ, ದೇವಾಲಯದಲ್ಲಿ ಮೂರು ಮುಖ್ಯ ಭಾಗಗಳಿವೆ – ಗರ್ಭ ಗೃಹ, ಎರಡು ಅಂಕಣಗಳುಳ್ಳ ಅಂತರಾಳ, ಅಪರೂಪದ ವಿನ್ಯಾಸವಿರುವ ಮುಖ ಮಂಟಪ ಹಾಗೂ ಗರ್ಭ ಗೃಹದ ಮೇಲಿರುವ ರುದ್ರಚ್ಛಂದ್ರ ಶಿಖರ. ಈ ಮುಖ ಮಂಟಪವನ್ನು ಚಿಕ್ಕ ದೇವರಾಜರು ಕಟ್ಟಿಸಿದ್ದೆಂದು ನಾವು ಖಚಿತವಾಗಿ ಹೇಳಬಹುದು. ಇದರಲ್ಲಿ ವಿಶೇಷವಾದ ಕಂಭ ಸಂಯೋಜನೆಯಿದೆ. ಮಧ್ಯದ ಅಂಕಣದಲ್ಲಿರುವ ಸಿಂಹ ಸವಾರರಾದ ಯೋಧರ ಶಿಲ್ಪವು ಮಧ್ಯ ಕಂಭಕ್ಕೆ ನಾಲ್ಕು ದಿಕ್ಕುಗಳಲ್ಲೂ ಜೋಡಣೆ ಮಾಡಿರುವ ಸಂಯುಕ್ತ ಕಂಭಗಳಿವೆ. ಇದು ಚಿಕ್ಕ ದೇವರಾಜರ ಕಾಲದಲ್ಲಿ ಬಂದ ರೂಢಿ. ಈ ಶೈಲಿಯನ್ನು ವಿಜಯನಗರದ ಶೈಲಿಯ ನಂತರದ ಬೆಳವಣಿಗೆಯನ್ನುತ್ತಾರೆ. ಆದರೆ, ಇದನ್ನು ಒಡೆಯರ್ ಶೈಲಿಯಂತಲೇ ಕರೆಯಬೇಕು.

ದೇವಾಲಯದ ಗರ್ಭ ಗೃಹದ ಗೋಡೆಗಳ ಮೇಲೆ ಅಪರೂಪದ ಗಿರಿಜಾ ಕಲ್ಯಾಣದ ಭಿತ್ತಿಗಳಿವೆ. ಇದರಲ್ಲಿ ವಿಶ್ವಕರ್ಮನಿಗೆ ವಿಶೇಷವಾದ ಸ್ಥಾನವಿದೆ. ನಾವು ದೇವಸ್ಥಾನದ ವಾಸ್ತು ಶಿಲ್ಪಕಲೆಯನ್ನು ಪೂರ್ಣವಾಗಿ ಅಧ್ಯಯನ ಮಾಡಿ ಪ್ರಕಟಿಸಿದ್ದೇವೆ. ಇದರಿಂದ ಮುಂದಿನ ಪೀಳಿಗೆಗೆ, ಆಸಕ್ತರಿಗೆ, ಪುರಾತತ್ವ ಇಲಾಖೆಗೆ ಉಪಯೋಗವಾಗುತ್ತದೆಂದು ಭಾವಿಸುತ್ತೇನೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s