ಇಂಟರ್ನ್ಯಾಷನಲ್ ಜಸ್ಟಿಸ್ ಮಿಷನ್ (ಐಜೆಎಂ) ಒಂದು ಸರ್ಕಾರೇತರ ಸಂಸ್ಥೆಯಾಗಿದ್ದು, ಈ ಸಂಸ್ಥೆಯು ಸರ್ಕಾರದ ಸಹಯೋಗದೊಂದಿಗೆ ಜೀತ ಕಾರ್ಮಿಕ ಪದ್ಧತಿ ಹಾಗೂ ಮಾನವ ಕಳ್ಳಸಾಗಾಣಿಕೆಯನ್ನು ನಿರ್ಮೂಲನೆ ಮಾಡಲು ಕೆಲಸ ಮಾಡುತ್ತಿದೆ. ಐಜೆಎಂ ಸಂಸ್ಥೆಯು ಕರ್ನಾಟಕದಲ್ಲಿ ಕಳೆದ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ.
ಜುಲೈ 30ರಂದು ವಿಶ್ವ ಮಾನವ ಕಳ್ಳಸಾಗಣೆ ವಿರೋಧಿ ದಿನವನ್ನು ಅನುಸರಿಸಲಾಗುತ್ತದೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಇಂಟರ್ನ್ಯಾಷನಲ್ ಜಸ್ಟಿಸ್ ಮಿಷನ್ ನ ಸಹಾಯಕ ನಿರ್ದೇಶಕಿಯಾದ ಶ್ರೀಮತಿ. ಪ್ರತಿಮಾ ರವರು ಮಾತನಾಡಿದ್ದಾರೆ.
ಪ್ರತಿಮಾರವರು ಈ ಕಾರ್ಯಕ್ರಮದಲ್ಲಿ ಮಾನವ ಕಳ್ಳಸಾಗಾಣಿಕೆ ಅಪರಾಧವು ಜೀತ ಕಾರ್ಮಿಕ ಪದ್ಧತಿಗೆ ಹೇಗೆ ಹೊಂದಿಕೊಂಡಿದೆ, ಇದರ ಕುರಿತು ಕಾನೂನು ಏನು ಹೇಳುತ್ತದೆ, ಕಾರ್ಮಿಕರು ಈ ಪದ್ಧತಿಗೆ ಒಳಗಾಗಿ ಹೇಗೆ ಶೋಷಣೆಗೆ ಗುರಿಯಾಗುತ್ತಾರೆ ಹಾಗೂ ಇದನ್ನು ತಡೆಗಟ್ಟುವುದು ಹೇಗೆ ಎಂಬ ಸಾಕಷ್ಟು ಮಾಹಿತಿಯನ್ನು ತಿಳಿಸಿಕೊಟ್ಟರು.
ಮಾಲಾ ಅವರು 2017 ರಲ್ಲಿ ಮೈಸೂರಿನ ಒಂದು ಕಬ್ಬು ಕಡಿಯುವ ಘಟಕದಲ್ಲಿ ಜೀತ ಪದ್ಧತಿಯಿಂದ ಬಿಡುಗಡೆಯಾದರು. ತನ್ನ ತಮ್ಮನ ಅನಾರೋಗ್ಯದ ಕಾರಣದಿಂದ ತನ್ನ ತಂದೆ ತಾಯಿ ಪಡೆದ ಸಾಲದಿಂದಾಗಿ ಕಬ್ಬು ಕಡಿಯುವ ಘಟಕದಲ್ಲಿ ಮಾಲಾಳ ಕುಟುಂಬ ಜೀತ ಮಾಡಬೇಕಾಯಿತು. ಮಾಲೀಕರು ಇವರನ್ನು ಕಬ್ಬು ಕಡಿಯಲು ವಿವಿಧ ಸ್ಥಳಗಳಿಗೆ ಸಾಗಿಸುತ್ತಿದ್ದನು ಮತ್ತು ಇವರಿಗೆ ಯಾವುದೇ ಮೂಲ ಸೌಕರ್ಯಗಳನ್ನು ನೀಡಲಾಗಿರಲಿಲ್ಲ. ಬಿಡುಗಡೆಯ ನಂತರ ಮಾಲಾ ಮತ್ತು ಆಕೆಯ ಕುಟುಂಬ ಸ್ವಾತಂತ್ರದ ಜೀವನವನ್ನು ನಡೆಸುತ್ತಿದ್ದಾರೆ.

ಐಪಿಸಿಯ 370ನೇ ಕಲಂ, ಅಪರಾಧಿಕ ಕಾನೂನು ತಿದ್ದುಪಡಿ ಕಾಯ್ದೆ 2013ರ ಪ್ರಕಾರ ಯಾರಾದರೂ ಬೆದರಿಸಿ, ಮೋಸದಿಂದ, ಅಪಹರಣ ಮಾಡಿ, ಆಮಿಷ ಒಡ್ಡಿ, ವಂಚಿಸಿ ಇಲ್ಲವೇ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ವ್ಯಕ್ತಿಗಳನ್ನು ನೇಮಕ ಮಾಡಿಕೊಂಡಿದ್ದರೆ, ಸ್ಥಳಾಂತರಿಸಿದ್ದರೆ ಇಲ್ಲವೇ ಒಂದೆಡೆಯಿಂದ ಇನ್ನೊಂದೆಡೆ ವರ್ಗಾಯಿಸಿದ್ದರೆ ಅದು ಮಾನವ ಕಳ್ಳಸಾಗಣೆ ಆಗುತ್ತದೆ. ಜೀತಪದ್ಧತಿ ಕೂಡ ಅನೇಕ ಸಂದರ್ಭಗಳಲ್ಲಿ ಮಾನವ ಕಳ್ಳಸಾಗಣೆಯೇ ಆಗುತ್ತದೆ. ಏಕೆಂದರೆ ಬೆದರಿಸಿ, ಮೋಸದಿಂದ, ಆಮಿಷ ಒಡ್ಡಿ ಇಲ್ಲವೇ ವಂಚನೆ ಮಾಡುವ ಮೂಲಕ ಆರಂಭದಲ್ಲಿ ಸಂಬಂಧ ಬೆಳೆಸಿ ನಂತರ ಅವರನ್ನು ಶೋಷಣೆಗೆ ಒಳಪಡಿಸುವುದು, ಅವರ ಸ್ವಾತಂತ್ರ್ಯ ಕಿತ್ತುಕೊಳ್ಳುವುದು, ನಿಗದಿತ ವೇತನಕ್ಕಿಂತ ಕಡಿಮೆವೇತನ ನೀಡಿ ವಂಚಿಸುವುದು ಮಾಡಲಾಗುತ್ತದೆ. ಮಾನವ ಕಳ್ಳ ಸಾಗಣೆಯು ಜಾಮೀನು ರಹಿತ ಹಾಗೂ ಸಂಜ್ಞೇಯ ಅಪರಾಧವಾಗಿದೆ. ಅನೇಕ ವ್ಯಕ್ತಿಗಳನ್ನು ಮಾನವ ಕಳ್ಳಸಾಗಣೆ ಮಾಡಿದ್ದಲ್ಲಿ ಅಂಥ ಅಪರಾಧಿಗಳಿಗೆ ಜೀವಾವಧಿಶಿಕ್ಷೆಯೂ ಆಗಬಹುದು.
ಜೀತ ಕಾರ್ಮಿಕ ಸಂತ್ರಸ್ತೆಯಾದ ಶಿವಮ್ಮ ಮತ್ತು ಆಕೆಯ ಕುಟುಂಬ ಸತತ 5 ವರ್ಷಗಳ ಕಾಲ ರಾಮನಗರದ ಇಟ್ಟಿಗೆ ಗೂಡೊಂದರಲ್ಲಿ ಬಲವಂತದ ಜೀತದ ದುಡಿಮೆ ಮಾಡುತ್ತಿದ್ದರು. 2014 ರ ಆಗಸ್ಟ್ ತಿಂಗಳಲ್ಲಿ ಇವರಿಗೆ ಜೀತದಿಂದ ಮುಕ್ತಿ ಸಿಕ್ಕಿತು. ಅಷ್ಟೇ ಅಲ್ಲದೆ ಈ ಒಂದು ಪ್ರಕರಣದಲ್ಲಿ ತಪ್ಪಿತಸ್ಥ ಆರೋಪಿ ಅಂದರೆ ಇಟ್ಟಿಗೆ ಗೂಡಿನ ಮಾಲೀಕನಿಗೆ ಮಾರ್ಚ್ 10, 2017 ರಂದು, ರಾಮನಗರದ ಸೆಷನ್ಸ್ ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಐಪಿಸಿ 370 (ವ್ಯಕ್ತಿಗಳ ಕಳ್ಳಸಾಗಣೆ) ಮತ್ತು ಜೀತ ಕಾರ್ಮಿಕ ಪದ್ಧತಿ (ನಿರ್ಮೂಲನೆ) ಕಾಯ್ದೆ 1976 ರ ಅಡಿಯಲ್ಲಿ ರೂ.16,000 ದಂಡವನ್ನು ವಿಧಿಸಿತು. ಶಿವಮ್ಮ ಮತ್ತು ಆಕೆಯ ಪತಿಯು ಇಂದು ದಿನಗೂಲಿ ಕೆಲಸ ಮಾಡುತ್ತ ಸ್ವಾತಂತ್ರದ ಜೀವನವನ್ನು ಜೀವಿಸುತ್ತಿದ್ದಾರೆ.
ಐಪಿಸಿಯ 370ನೇ ಕಲಂ, ಅಪರಾಧಿಕ ಕಾನೂನು ತಿದ್ದುಪಡಿ ಕಾಯ್ದೆ 2013ರ ಪ್ರಕಾರ ಯಾರಾದರೂ ಬೆದರಿಸಿ, ಮೋಸದಿಂದ, ಅಪಹರಣ ಮಾಡಿ, ಆಮಿಷ ಒಡ್ಡಿ, ವಂಚಿಸಿ ಇಲ್ಲವೇ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ವ್ಯಕ್ತಿಗಳನ್ನು ನೇಮಕ ಮಾಡಿಕೊಂಡಿದ್ದರೆ, ಸ್ಥಳಾಂತರಿಸಿದ್ದರೆ ಇಲ್ಲವೇ ಒಂದೆಡೆಯಿಂದ ಇನ್ನೊಂದೆಡೆ ವರ್ಗಾಯಿಸಿದ್ದರೆ ಅದು ಮಾನವ ಕಳ್ಳಸಾಗಣೆ ಆಗುತ್ತದೆ. ಜೀತಪದ್ಧತಿ ಕೂಡ ಅನೇಕ ಸಂದರ್ಭಗಳಲ್ಲಿ ಮಾನವ ಕಳ್ಳಸಾಗಣೆಯೇ ಆಗುತ್ತದೆ. ಏಕೆಂದರೆ ಬೆದರಿಸಿ, ಮೋಸದಿಂದ, ಆಮಿಷ ಒಡ್ಡಿ ಇಲ್ಲವೇ ವಂಚನೆ ಮಾಡುವ ಮೂಲಕ ಆರಂಭದಲ್ಲಿ ಸಂಬಂಧ ಬೆಳೆಸಿ ನಂತರ ಅವರನ್ನು ಶೋಷಣೆಗೆ ಒಳಪಡಿಸುವುದು, ಅವರ ಸ್ವಾತಂತ್ರ್ಯ ಕಿತ್ತುಕೊಳ್ಳುವುದು, ನಿಗದಿತ ವೇತನಕ್ಕಿಂತ ಕಡಿಮೆವೇತನ ನೀಡಿ ವಂಚಿಸುವುದು ಮಾಡಲಾಗುತ್ತದೆ. ಮಾನವ ಕಳ್ಳ ಸಾಗಣೆಯು ಜಾಮೀನು ರಹಿತ ಹಾಗೂ ಸಂಜ್ಞೇಯ ಅಪರಾಧವಾಗಿದೆ. ಅನೇಕ ವ್ಯಕ್ತಿಗಳನ್ನು ಮಾನವ ಕಳ್ಳಸಾಗಣೆ ಮಾಡಿದ್ದಲ್ಲಿ ಅಂಥ ಅಪರಾಧಿಗಳಿಗೆ ಜೀವಾವಧಿಶಿಕ್ಷೆಯೂ ಆಗಬಹುದು.
ತಮಿಳು ನಾಡಿನಿಂದ ಬೆಂಗಳೂರಿಗೆ ಕಳ್ಳಸಾಗಾಣೆಗೊಳಗಾಗಿ, ಜೀತ ಪದ್ಧತಿಯಲ್ಲಿ ಸಿಲುಕಿಕೊಂಡು 2013 ರಲ್ಲಿ ಬಿಡುಗಡೆಗೊಂಡ ಸಂತ್ರಸ್ತನಾದ ರಮೇಶ್ ಅವರು ತಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡರು. ರಮೇಶ್ ಅವರಿಗೆ ವ್ಯವಸಾಯ ಕೆಲಸ, ಒಳ್ಳೆ ಸಂಬಳ ಹಾಗೂ ಇತರೆ ವ್ಯವಸ್ಥೆಯನ್ನು ನೀಡುವುದಾಗಿ ನಂಬಿಸಿ ಬೆಂಗಳೂರಿಗೆ ಕರೆತಂದ ನಂತರ ಮರಳು ಸೋಸುವ ಕೆಲಸಕ್ಕೆ ದೂಡಿ ಮೋಸಗೊಳಿಸಲಾಯಿತು. 2 ವರ್ಷ ಹಗಲು ರಾತ್ರಿ ಎನ್ನದೆ ಅವರನ್ನು ಅವರ ಕುಟುಂಬವನ್ನು ಅಮಾನವೀಯವಾಗಿ ದುಡಿಸಿಕೊಳ್ಳಲಾಯಿತು. ಜೀತದಿಂದ ಬಿಡುಗಡೆಯಾದ ನಂತರ ರಮೇಶ್ ಅವರು ತನ್ನ ಸ್ವಂತ ಊರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು, ಒಬ್ಬ ಪಂಚಾಯತ್ ಮುಖಂಡನಾಗಿ ಹಲವರ ಸಮಸ್ಯೆಯನ್ನು ಬಗೆಹರಿಸುವ ಕೆಲಸ ಮಾಡುತ್ತಿದ್ದಾರೆ.