Library on Air: Round up of the Buguri Podcast Series Season 2

ಮಕ್ಕಳ ನೆಚ್ಚಿನ ಆಟ ಬುಗುರಿ ಆಟ. ಬಣ್ಣ ಬಣ್ಣದ ಬುಗುರಿ ತಿರುಗುತ್ತಿದ್ದರೆ ಅದನ್ನು ನೋಡುವುದುಮಕ್ಕಳಿಗೆ ಅತ್ಯಂತಖುಷಿಯ ವಿಚಾರ, ಹಾಗೆಯೆ ಬಣ್ಣ ಬಣ್ಣದ ಪುಸ್ತಕಗಳಿಂದ, ಹಲವಾರು ಚಿತ್ರಗಳಿಂದ ಸಮೃದ್ಧವಾಗಿರುವ ”ಬುಗರಿಗ್ರಂಥಾಲಯ ” ಮಕ್ಕಳಿಗೆ ಪ್ರಿಯವಾಗಿದೆ.. ಈ ಗ್ರಂಥಾಲಯವನ್ನು ತ್ಯಾಜ್ಯಕಸವನ್ನು ವಿಲೇವಾರಿ ಮಾಡುವ ಕಾರ್ಮಿಕರೊಂದಿಗೆ ಕೆಲಸ ನಿರ್ವಹಿಸುತ್ತಿರುವ ” ಹಸಿರುದಳ ” ಸಾಮಾಜಿಕ ಸಂಘಟನೆಯ ಸಹ ಭಾಗಿತ್ವದಲ್ಲಿ ರೂಪಿಸಲಾಗಿದೆ. ಇದು  ಮಕ್ಕಳಿಗಾಗಿ ಇರುವ ಸಮುದಾಯಗ್ರಂಥಾಲಯವಾಗಿದೆ. ಹಸಿರುದಳ ಸಂಸ್ಥೆಯೂರಾಜ್ಯದ ಬೆಂಗಳೂರು, ಮೈಸೂರು, ತುಮಕೂರು ನಗರಗಳಲ್ಲಿ ಬುಗುರಿ ಸಮುದಾಯ ಗ್ರಂಥಾಲಯಗಳನ್ನು ಸ್ಥಾಪಿಸಿ ಸಮುದಾಯದ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದೆ. ಕಸ ವಿಲೇವಾರಿ ಮಾಡುವವರ ಮಕ್ಕಳು ಶಿಕ್ಷಣದಿಂದ ವಂಚಿತರಾಗದoತ್ತೆ ಮತ್ತು ಅವರಲ್ಲಿ ಶಿಕ್ಷಣದ ಬಗೆಗೆ ಆಸಕ್ತಿ ಮೂಡಿಸಿ, ಶಿಕ್ಷಣದ ಮೂಲಕ ಅವರನ್ನು ಸಬಲರನ್ನಾಗಿಸುವಧ್ಯೇಯವನ್ನು ಹಸಿರುದಳ ಸಂಸ್ಥೆ ಹೊಂದಿದೆ.

ಇನ್ನು ಕರ್ನಾಟಕದಲ್ಲಿ ೧,೦೦,೦೦೦ ಕ್ಕೂ ಹೆಚ್ಚು ಕಸ ವಿಲೇವಾರಿ ಮಾಡುವವರಿದ್ದು, ಅವರೆಲ್ಲರೂ ಅಸಂಘಟಿತರಾಗಿದ್ದಾರೆ. ಈ ತ್ಯಾಜ್ಯದೊಂದಿಗೆ ಕೆಲಸ ಮಾಡುವ ಬಹುತೇಕ ಜನರು ಆರ್ಥಿಕವಾಗಿ ಹಿಂದುಳಿದ ವರ್ಗದವರಾಗಿದ್ದು, ಅದರಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ತ್ಯಾಜ್ಯ ವಿಲೇವಾರಿ ಮಾಡುವ ಕುಟುಂಬಗಳಲ್ಲಿರುವ ಮಕ್ಕಳು  ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸುತ್ತಿದ್ದು, ತಮ್ಮ ಪೋಷಕರೊಂದಿಗೆ ತ್ಯಾಜ್ಯ ವಿಲೇವಾರಿಕೆಲಸ ಮಾಡುವ ಮಕ್ಕಳು ಶಾಲೆಗೆ ಹೋಗದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅದೇರೀತಿ ಕಸ ವಿಲೇವಾರಿಮಾಡುವ ಕೆಲಸದಲ್ಲಿ ಸರಿಯಾದ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಇರುವುದರಿಂದ ಮಕ್ಕಳು ತೀವ್ರತರದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.ಇದು ಮಕ್ಕಳಿಗೆ ಅವರ ಕುಟುಂಬಗಳಿಗೆ ಗಂಭೀರ ಪರಿಣಾಮವನ್ನು ಬೀರುತ್ತಿದ್ದು, ಇದರಿಂದ ಈ ಸಮುದಾಯದ ಮಕ್ಕಳು ಶಿಕ್ಷಣವಿಲ್ಲದೆ, ಉತ್ತಮ ಉದ್ಯೋಗವಿಲ್ಲದೆ, ಆರೋಗ್ಯರಕ್ಷಣೆಯಿಲ್ಲದೇ ಸದಾ ಬಡತನದಲ್ಲೇಜೀವನ ಸಾಗಿಸುತ್ತಿವೆ.

ಹಸಿರುದಳ ಸಂಸ್ಥೆಯೂ ಈ ಸಮುದಯಗಳ ಏಳಿಗೆಗಾಗಿ ಶಿಕ್ಷಣವನ್ನೇ ಪ್ರಮುಖ ಅಸ್ತವನ್ನಾಗಿ ಬಳಸಲು ನಿರ್ಧರಿಸಿದ್ದು, ಕಸ ವಿಲೇವಾರಿ ಮಾಡುವವರ ಮಕ್ಕಳನ್ನು ಗುರುತಿಸಿಅವರಿಗೆ ಶಿಕ್ಷಣವನ್ನು ಪೂರ್ಣಗೊಳಿಸಲು ಸಹಕರಿಸುತ್ತಿದೆ. ಇನ್ನು ಬುಗುರಿ ಗ್ರಂಥಾಲಯಗಳು ಈ ಸಮುದಾಯಗಳ ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಸೃಜನಾತ್ಮಕ ಚಟುವಟಿಕೆಗಳನ್ನು ಉತ್ತೇಜಿಸುವುದಕ್ಕಾಗಿ ನಿರ್ಮಾಣವಾಗಿವೆ.ಇಲ್ಲಿ ಮಕ್ಕಳಿಗೆ ಸಾಮಾಜಿಕ ಸಂವಹನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದ್ದು, ವಿಭಿನ್ನ ಆಲೋಚನೆಗಳು, ಕಲ್ಪನೆಗಳು ಹಾಗೂ ಮಕ್ಕಳ ಅಭಿವ್ಯಕ್ತಿಗೆ ಸಹಾಯವಾಗುವ ಕಾರ್ಯಕ್ರಮಗಳನ್ನು ಬುಗುರಿಯಲ್ಲಿ ನಡೆಸಲಾಗುತ್ತಿದೆ.


ಇನ್ನು ಲಾಕ್‌ಡೌನ್ ಸಂದರ್ಭದಲ್ಲಿ ಶಾಲೆಗಳನ್ನು ಮುಚ್ಚಲಾಯಿತು. ಈ ಸಂದರ್ಭದಲ್ಲಿ ಬುಗುರಿ ಗ್ರಂಥಾಲಯಗಳು ಹೇಗೆ ಕಾರ್ಯನಿರ್ವಹಿಸಿದವು? ಲಾಕ್‌ಡೌನ್‌ನಲ್ಲಿ ಬುಗುರಿ ಗ್ರಂಥಾಲಯ ಸಮುದಾಯದ ಮಕ್ಕಳಿಗಾಗಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಅದರಲ್ಲೂ ಮುಖ್ಯವಾಗಿ ‘ಬುಗುರಿ ಪಾಡ್‌ಕಾಸ್ಟ್ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಕಥೆ, ಕವನ, ವಿಜ್ಙಾನದ ಬಗೆಗೆ ತಿಳುವಳಿಕೆ, ಮಾಯಾ-ತುಂಗಾ ಕಥಾ ಸರಣಿಯ ಮೂಲಕ ಕೋವಿಡ್ ಜಾಗೃತಿಯನ್ನು ಮಕ್ಕಳಲ್ಲಿ ಮೂಡಿಸಲಾಯಿತು. ಈ ಬುಗುರಿ ಪಾಡ್‌ಕಾಸ್ಟ್ ಕಾರ್ಯಕ್ರಮ ‘ರೆಡಿಯೋಆಕ್ಟಿವ್’ ಎಂಬ ಸಮುದಾಯ ರೆಡಿಯೋ ಸ್ಟೇಷನ್‌ನಲ್ಲಿ ಕನ್ನಡ, ಇಂಗ್ಲೀಷ, ತಮಿಳು, ಬೆಂಗಾಳಿ ಮತ್ತು ಹಿಂದಿ ಭಾಷೆಗಳಲ್ಲಿ ಪ್ರಸಾರವಾಗಿದ್ದು ವಿಶೇಷ.ಇನ್ನು ೩೦ಕ್ಕೂ ಹೆಚ್ಚು ಆಸಕ್ತರೂ ಈ ಕಾರ್ಯಕ್ರಮಕ್ಕೆ ಧ್ವನಿ ನೀಡಿದ್ದಾರೆ. ಈ ಬುಗುರಿ ಪಾಡ್‌ಕಾಸ್ಟ್ ಕಾರ್ಯಕ್ರಮದಲ್ಲಿ ಕೆಲಸ ನಿರ್ವಹಿಸಿದ ಸಂಪನ್ಮೂಲ ವ್ಯಕ್ತಿಗಳು ತಮ್ಮ ಅನುಭವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ಚೈತ್ರ ಟಿ ಎಸ್ :- ಸೀಸನ್ ಒಂದರಲ್ಲಿ ಕಾರ್ಯಕ್ರಮ ಹೊಸದಾಗಿತ್ತು. ನಮಗೆ ಕಲಿಕೆ ಹೆಚ್ಚಾಗಿತ್ತು. ಅದೇ ರೀತಿ ಸೀಸನ್ ಎರಡರಲ್ಲಿ ಹೊಸ ಹೊಸ ವಿಚಾರಗಳನ್ನು ಕುರಿತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಹೊಸ ಕಥೆ, ಕೋವಿಡ್ ಬಗ್ಗೆ ತಿಳುವಳಿಕೆಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಶಾಲೆಯಿಲ್ಲದೆ ಮನೆಯಲ್ಲೇ ಇರುವ ಮಕ್ಕಳ ಮನೋಸ್ಥಿತಿ, ಪೋಷಕರೊಂದಿಗೆ ಒಡನಾಟ , ಆರೋಗ್ಯ , ಪೌಷ್ಟಿಕ ಆಹಾರ, ವಲಸೆಹೋದ ಕುಟುಂಬಗಳಿಗೆ ಮಾಹಿತಿ ನೀಡಿ ಮಕ್ಕಳಲ್ಲಿ ಕಲಿಕೆಯನ್ನು ಹೆಚ್ಚಿಸಲಾಯಿತು. ಈ ಎಲ್ಲ ಕಾರ್ಯಕ್ರಮಗಳು ನಮಗೆ ಖುಷಿ ಕೊಟ್ಟವು.

ಪಲ್ಲವಿ :- ಸೀಸನ್ ಎರಡರಲ್ಲಿ ಅತ್ಯಂತ ರೋಮಾಂಚನಕಾರಿ ಮತ್ತು ಮೋಜಿನ ಅಂಶವೆಂದರೆ ತುಂಗಾ ಮತ್ತು ಮಾಯಾ ಪಾತ್ರಗಳು. (ಈ ಸಂದರ್ಶನದಲ್ಲಿ ಪಲ್ಲವಿ ಅವರು ಈ ಕಾಲ್ಪನಿಕ ಪಾತ್ರಗಳನ್ನು ಹೇಗೆ ಮತ್ತು ಏಕೆ ತಂದರು ಎಂಬುದರ ಕುರಿತು ಮಾತನಾಡಿದ್ದಾರೆ ಇವರು ಬುಗುರಿಗ್ರಂಥಾಲಯದ ಮಕ್ಕಳ ಶಿಕ್ಷಕಿ ಯಾಗಿದ್ದಾರೆ ) ಲಾಕ್‌ಡೌನ್ ಪ್ರಾರಂಭವಾದಾಗ ಗ್ರಂಥಾಲಯದ ಮಕ್ಕಳಿಗೆ ಹೇಗೆ ಕಲಿಸುವುದು ? ಸಾಂಕ್ರಾಮಿಕ ರೋಗದ ಬಗ್ಗೆ ಅರಿವು ಹೇಗೆ ಮೂಡಿಸುವುದು? ಸದ್ಯದ ಪರಿಸ್ಥಿಯನ್ನು ಮಕ್ಕಳು ಹೇಗೆ ನಿಭಾಯಿಸುತ್ತಿದ್ದಾರೆ?  ಎಂಬ ಪ್ರಶ್ನೆ ನನ್ನನ್ನು ಕಾಡಿತು. ತಕ್ಷಣ ಮಕ್ಕಳನ್ನು ಸಭೆಗೆ ಈ ಸಂದರ್ಭದಲ್ಲಿ ಕರೆಯಲಾಗುವುದಿಲ್ಲ. ಆದರೆ ಮಕ್ಕಳೊಂದಿಗೆ ನಿರಂತರ ಸಂಪರ್ಕದಲ್ಲಿ ಇರುವುದು ಬಹಳ ಮುಖ್ಯ ಅನಿಸಿತು. ಮಕ್ಕಳಿಗೆ ಮೊಬೈಲ್ ಮೂಲಕ ಕತೆ ಹೇಳುವುದು, ಮಕ್ಕಳು ಮನೆಯಲ್ಲೇ ಕೇಳಿದ ಪದಗಳ ಪಟ್ಟಿ ಮಾಡಲು ತಿಳಿಸಿ, ಒಂದು ದಿನ ಮಳೆ ಬಂದ ಸಂದರ್ಭದಲ್ಲಿ ಮಕ್ಕಳನ್ನು ಸಂಪರ್ಕಿಸಿ ಕಥೆ ಹೇಳುವುದು, ಕಥೆ-ನಾಟಕಗಳ ಮೂಲಕ ಮಕ್ಕಳಿಗೆ ಹೆಚ್ಚಿನ ಮಾಹಿತಿ ನೀಡಬಹುದು ಎಂಬುದನ್ನು ನಾವು ಸೃಷ್ಠಿಸಿದ ಕಾಲ್ಪನಿಕ ಪಾತ್ರಗಳಾದ ತುಂಗಾ ಮತ್ತು ಮಾಯಾ ಮೂಲಕ ಮಾಡಲಾಯಿತು. ನನಗೆ ಈ ಪಾತ್ರಗಳು ತುಂಬ ಸಂತೋಷಕೊಟ್ಟಿದೆ.

ಸಾತ್ವಿಕ್ : ಬುಗುರಿ  ಗ್ರಂಥಾಲಯದೊಡನೆ ನಾನು ಅನೇಕ ಚಟುವಟಿಕೆಗಳಲ್ಲಿ ಭಾಗಿಯಾದೆ. ಮಕ್ಕಳಿಗೆ ಕಥೆಯ ರೂಪದಲ್ಲಿ ಕೋಪವನ್ನು ನಿಯಂತ್ರಿಸುವ ಕುರಿತು  ಕಥೆ ಹೇಳಿದೆ, ಹಾಗೇ ಕಡ್ಲೆ ಉಸಲಿ ಅಡುಗೆ ಹೇಗೆ  ಮಾಡುವುದು ಎಂಬುದನ್ನು ಹೇಳಿಕೊಟ್ಟೆ. ಅದೇ ರೀತಿ ನಾನು ನಾಟಕದಲ್ಲಿ ತುಂಗಾ ಪಾತ್ರಕ್ಕೆ ಧ್ವನಿ ನೀಡಿದ್ದು ಬಹಳ ಸಂತೋಷವಾಯಿತು . ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಮಗುವಿನ ಮನಸ್ಥಿತಿ ಹೇಗಿರುತ್ತದೆ ಎಂಬುದನ್ನು ಎಲ್ಲಾರಿಗೂ ತಿಳಿಸಲು ಈ ಕಾರ್ಯಕ್ರಮಗಳು ಸಹಾಯ ಮಾಡಿದವು.

ರಮ್ಯಾ ಶ್ರೀನಿಧಿ : ಬನಶಂಕರಿಯಲ್ಲಿರುವ ಬುಗರಿ ಗ್ರಂಥಾಲಯಕ್ಕೆ ಭೇಟಿನೀಡಿದ್ದು ಅದನ್ನು ಮರೆಯಲು ಸಾಧ್ಯವಿಲ್ಲ. ನನಗೆ ತುಂಗಾ ನಾಟಕದಲ್ಲಿ ನಿರೂಪಕಿಯ ಪಾತ್ರ ನೀಡಿದರು. ಇದು ಬಹಳ ಸಂತೋಷವಾಯಿತು. ಹಾಗೇ ” ಗಟ್ಟಿಯಾಗಿ ಓದು ” ನನ್ನ ನೆಚ್ಚಿನ ಕಾರ್ಯಕ್ರಮ.

ಆರ್‌ಜೆ ಓಹಿಲಾ :  ಈ ಲಾಕ್‌ಡೌನ್ನಲ್ಲಿ ಇಂಥೊAದು ಕಾರ್ಯಕ್ರಮಕ್ಕೆ ನಿರುಪಕಿಯಾಗಿ ದ್ವನಿ ನೀಡಿದ್ದು ತುಂಬಾ ಖುಷಿ ಸಿಕ್ಕಿತು. ಜೊತೆಗೆ ಕೋವಿಡ್ ಬಗ್ಗೆ ಮಾಹಿತಿ ನೀಡಿ, ಮಕ್ಕಳಲ್ಲಿ ಓದು , ಕಲ್ಪನೆ , ಭರವಸೆ ಮೂಡಿಸುತ್ತಿರುವ ರೇಡಿಯೋ ಆಕ್ಟಿವಿಗೆ ನನ್ನ ವಂದನೆಗಳು.

ರೇಡಿಯೋ ಆಕ್ಟಿವಿನ ಹಿರಿಯ ಕಾರ್ಯಕರ್ತೆಯರಾದ ವಿಜಯ ಹಾಗೂ ಮಂಜುಳಾ ಕೂಡ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಮಕ್ಕಳ ಭಾಗವಹಿಸುವಿಕೆಯ ಬಗ್ಗೆ ಸಂತೋಷ ಪಟ್ಟ ವಿಜಯ ”ಸೀಸನ್ ೧ ಮತ್ತು ೨ ಚನ್ನಾಗಿ ಮೂಡಿಬಂದಿದೆ. ನಾವು ಸೀಸನ್ ೩ರಲ್ಲಿ ಭಾಗವಹಿಸುತ್ತೇನೆ. ವಿಭಿನ್ನ ಯೋಚನೆ , ಬಗೆಬಗೆಯ ಕಲಿಕೆ ನನಗೆ ಇಷ್ಟವಾಯಿತು. ನಾವು ಸೀಸನ್ ೩ ರಲ್ಲಿ ಭಾಗವಹಿಸಲು ಉತ್ಸಹಕರಾಗಿದ್ದೇವೆ. ಮಕ್ಕಳಿಂದಲೇ ವಿಭಿನ್ನ  ರೀತಿಯಲ್ಲಿ ಕಾರ್ಯಕ್ರಮಗಳನ್ನು ಹೊರತರುವುದು ನಮ್ಮ ಗುರಿಯಾಗಿದೆ .

Playlist for Season 2

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s